ಉಚ್ಚಾ ಗ್ರಾಮದಲ್ಲಿ ಕರೋನಾ ಜನಜಾಗೃತಿ ಕಾರ್ಯಕ್ರಮ

ಭಾಲ್ಕಿ:ಎ.29: ತಾಲೂಕಿನ ಉಚ್ಚಾ ಗ್ರಾಮದಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿ, ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಹಾಗೂ ಪೂಜ್ಯ ದಿವ್ಯಯೋಗಿ ಕಂಠಯ್ಯ ಸ್ವಾಮಿಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ತ ಕೊರೋನ ಜನಜಾಗೃತಿ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟೈಜರ್ ಬಳಕೆ ಮಾಡುವ ನೀಡುತ್ತಾ ಇದೇ ವೇಳೆ ಮಾತನಾಡಿದ ಶಾಂತಯ್ಯಾ ಸ್ವಾಮಿಯವರು, ಈ ಕರೋನ ಮಹಾಮಾರಿ ರೋಗವು ತುಂಬಾ ಉಲ್ಬನವಾಗಿದ್ದು ಹಳ್ಳಿಯಿಂದ ದಿಲ್ಲಿ ವರೆಗೂ ವ್ಯಾಪಿಸಿದೆ ಎಂದರು.
ಆದಕಾರಣ ನಾವೆಲ್ಲರೂ ಒಂದಾಗಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಪರಸ್ಪರ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಗತ್ಯ ವಿದ್ದಾಗಲೇ ಮನೆಯಿಂದ ಹೊರಗೆ ಬರಬೇಕು ಸುಖಾ ಸುಮ್ಮನೆ ಅಡ್ಡಾಡುವುದು ಮಾಡಬಾರದು. ಈ ಕರೋನ ರೋಗವು ಗಂಡು, ಹೆಣ್ಣು, ವಯಸ್ಸಿನ ಮಿತಿ ಇಲ್ಲದೆ 20 ವಯಸ್ಸಿನ ಯುವಕರಿಂದ ವೃದ್ಧರ ಪ್ರಾಣ ತೆಗೆದಿದ್ದು ಜಾಗರೂಕತೆಯಿಂದ ಇದರ ವಿರುದ್ಧ ಹೋರಾಡಬೇಕಿದೆ. ಆದಕಾರಣ ನಾವೆಲ್ಲರೂ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ವಿನಾಕಾರಣ ಅಡ್ಡಾಡದೆ ಜಾಗರೂಕರಾಗಿ ಇರಬೇಕು ಎಂದು ಹೇಳಿದರು.
ದಿವ್ಯಯೋಗಿ ಕಂಠಯ್ಯ ಸ್ವಾಮಿ ಸರಳ, ಸಜ್ಜನ ಸಂತ . ಬಹುಮುಖ ಪ್ರತಿಭೆಯುಳ್ಳ ಇವರು ತಮ್ಮ ಅನುಭಾವ ಹಾಗೂ ಜ್ಞಾನದ ಬೆಳಕನ್ನು ಸುತ್ತಲಿನ ಎಲ್ಲರಿಗೂ ಬಡವ-ಶ್ರೀಮಂತ ಎನ್ನದೆ ತಮ್ಮ ಜ್ಞಾನವನ್ನು ಸಮಾಜದ ಜನಸಾಮಾನ್ಯರ ಒಳಿತಿಗಾಗಿ ಇಟ್ಟಿದ್ದರು. ಇವರು ರಮಲ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಸಂಗೀತ, ಧಾರ್ಮಿಕ, ಶಿವಯೋಗ, ಆಯುರ್ವೇದ ವೈದ್ಯ ಶಾಸ್ತ್ರ, ವಾಸ್ತು ಶಾಸ್ತ್ರ, ಜಲ ಶಾಸ್ತ್ರ ಹೀಗೆ ಅನೇಕ ವಿಷಯಗಳ ಪಾಂಡಿತ್ಯ ಹೊಂದಿದ್ದರು. ಅನೇಕ ಬಾರಿ ಆಸ್ಪತ್ರೆಗಳಲ್ಲಿ ಕಡಿಮೆಯಾಗದ ಅನೇಕ ರೋಗಗಳನ್ನು ಇವರು ಉಚಿತವಾಗಿ ಆಯುರ್ವೇದದ ವೈದ್ಯಜ್ಞಾನದ ಮೂಲಕ ಗುಣಪಡಿಸಿದ್ದಾರೆ. ಎಂದು ಸುತ್ತಲಿನ ಜನರು ಹೇಳುತ್ತಾರೆ. ಈ ಎಲ್ಲಾ ಸತ್ಕಾರ್ಯದಿಂದಾಗಿ ಇವರಿಗೆ ಈ ಭಾಗದಲ್ಲಿ ಅಪಾರ ಜನ ಇವರ ಶಿಷ್ಯರಿದ್ದಾರೆ. ಕಳೆದ 2019 ರಂದು ಶ್ರೀಗಳು ಲಿಂಗೈಕ್ಯರಾದರು. ಅವರ ಸಮಾಧಿ ಉಚ್ಚ ಗ್ರಾಮದ ಹೊರವಲಯದಲ್ಲಿ ಮಾಡಲಾಗಿದೆ.
ಇವರ ಮಕ್ಕಳಾದ ಶಾಂತಯ್ಯಾ ಸ್ವಾಮಿ, ಶಿವಯೋಗಿ ಸ್ವಾಮಿ ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳ 28 ರಂದು ತಮ್ಮ ತಂದೆಯವರ ಸ್ಮರಣೆಯಲ್ಲಿ ಶಿವಾನುಭವ ಗೋಷ್ಠಿ ನಡೆಸುತ್ತಾ ಬಂದಿದ್ದಾರೆ ಎಂದರು.
ಈ ವೇಳೆ ದ್ವಿತೀಯ ಪುಣ್ಯಸ್ಮರಣೆ ಹಾಗೂ 24 ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಕರೊನ ಜನಜಾಗೃತಿ ಮತ್ತು ಬಡವರಿಗೆ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟೈಜರ್ ನೀಡಲಾಯಿತು.
ಸಮಾರಂಭದಲ್ಲಿ ಅಶೋಕ್ ಪಾಟೀಲ್, ಬಾಬುರಾವ್ ಹಳ್ನೂರೆ, ಶ್ರೀಮಂತಪ್ಪಾ ಕಾಗೆ ಮೋರಂಬಿ, ಗುರುನಾಥ್ ಬಾದಲಗಾವೆ, ನೀಲಕಂಠ ಸ್ವಾಮಿ , ಶರಣಪ್ಪ ಆಳ್ಳೆ, ಧನರಾಜ್ ಆಳ್ಳೇ ,ಕಾಮರಾಜ್ ಮೇತ್ರೆ, ಏಕನಾಥ್, ಸಂತೋಷ್, ಸಂತೋಷ್ ಬಿರಾದರ್, ಧರಂಪಾಲ್, ವಿಠಲ್ ಆರಾದೆ, ಕಾಶಿನಾಥ್ ರಾವ್ ಮಾನಕರಿ, ನಾಗನಾಥ ಮೇತ್ರೆ, ರಾಜಕುಮಾರ್ ಸಂಕಣ್ಣ, ಲಕ್ಷ್ಮಣ ಶೇಡೊಳೆ, ರವಿ ಪಾಂಚಾಲ, ಬಸವರಾಜ ಮೇತ್ರೆ, ರಾಜಣ್ಣ ಹೋಸುರೆ, ನೀಲಕಂಠ ಧರ್ಮಣ್ಣ, ಮೈಬುಬ್ ಪಟೇಲ್ ಮೊರಂಬೀ, ಅಂಜಲಿ, ಸಾಯಿನಾಥ್, ಸುನೀತಾ, ಶ್ರೀದೇವಿ ಸ್ವಾಮಿ, ಕವನ, ಸಿದ್ದಮ್ಮ ಹಲ್ಬರ್ಗೆ ರಾಚಪ್ಪ ಗೌಡಗಾವ್, ಮಹಾದೇವಿ ಆಳ್ಳೆ ಇದ್ದರು. ಬಸವರಾಜ್ ವಾರದ ಅಧ್ಯಕ್ಷತೆ ವಹಿಸಿದ್ದರು. ಶಿವಯೋಗಿ ಸ್ವಾಮಿ ಪೂಜೆ ಸಲ್ಲಿಸಿದರು. ನಿರ್ಮಲಾ ಸ್ವಾಮಿ ವಚನ ಗಾಯನಮಾಡಿದರು. ಸಿದ್ದಲಿಂಗ ವಂದಿಸಿದರು. ಚಂದನ ಸ್ವಾಮಿ ಕಾರ್ಯಕ್ರಮ ನಿರೂಪಣೆ ಮಾಡಿದರು.