ಉಚ್ಚಗಣಿ ದೇವಾಲಯ ತೆರವು ಮಾಡಿರೋದು ಅಧಿಕಾರಿಗಳ ತಪ್ಪು

ಮೈಸೂರು: ಸೆ.26: ಉಚ್ಚಗಣಿ ದೇವಾಲಯ ತೆರವು ಅಧಿಕಾರಿಗಳು ಮಾಡಿರೋದು ತಪ್ಪು. ಅಧಿಕಾರಿಗಳು ಸರ್ಕಾರದ ಗಮನಕ್ಕೆ ಬಾರದಂತೆ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ತಲೆದಂಡದ ಬಗ್ಗೆ ಸಿಎಂ ಹಾಗೂ ಕಂದಾಯ ಸಚಿವರು ಯೋಚನೆ ಮಾಡ್ತಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವರು, ಈ ವಿಚಾರದ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಆಗಿದೆ. ಇದರ ಬಗ್ಗೆ ಸರ್ಕಾರವು ಮಸೂದೆಯನ್ನು ಜಾರಿಗೆ ತರುತ್ತಿದೆ. ಇದು ಜನರ ಭಾವನಾತ್ಮಕ ವಿಚಾರವಾಗಿದೆ. ಅವರ ಭಾವನೆಗಳಿಗೂ ಬೆಲೆ ಕೊಡಬೇಕಾಗಿದೆ ಎಂದು ತಿಳಿಸಿದ್ದಾರೆ. ಉಚ್ಚ ನ್ಯಾಯಾಲಯ ಅದೇಶವನ್ನ ಪಾಲನೆ ಮಾಡಿಕೊಂಡು ಮಸೂದೆ ಜಾರಿಗೆ ತರಲಾಗುವುದು. ಈ ಮಸೂದೆಯಿಂದ ರಾಜ್ಯದ ಸಾವಿರಾರು ದೇವಾಲಯಗಳು ರಕ್ಷಣೆಯಾಗಲಿದೆ. ಎಲ್ಲಾ ಧರ್ಮದ ಚರ್ಚು ಮಸೀದಿ ದೇವಾಲಯಗಳು ರಕ್ಷಣೆಯಾಗಲಿವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.