ಉಚ್ಚಂಗೆಮ್ಮ ದೇವಿಯ ಜಾತ್ರೆಗೆ ಅಪಾರ ಭಕ್ತರ ಸಮೂಹ.

ಹರಪನಹಳ್ಳಿ. ಮಾ.೨೫; ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಐತಿಹಾಸಿಕ ಸ್ಥಳವಾದ ಉಚ್ಚಂಗೆಮ್ಮ ಮತ್ತು ಹಾಲಮ್ಮ ದೇವಿಯ ದರ್ಶನಕ್ಕೆ ದೂರದ ಜಿಲ್ಲೆಗಳಾದ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಕುಟುಂಬ ಸಮೇತರಾಗಿ ಭಕ್ತರು ಆಗಮಿಸಿ ದೇವಿಯ ದರ್ಶನ ಮಾಡಿ,ಹಾಲಮ್ಮ ನ ತೋಪಿನಲ್ಲಿ ಭಕ್ತರು ಬೇವಿನುಡುಗೆ ಹಾಗೂ ದೀಡುನಮಸ್ಕಾರ ಹಾಕಿ, ಹೂವು, ಹಣ್ಣು, ಕಾಯಿ ದೇವಿಗೆ ಸಮರ್ಪಿಸಿದರು.ಜೊತೆಗೆ ದೇವಿಗೆ ಉಚ್ಚಂಗೆಮ್ಮ ನಿನ್ನಾಲ್ಕುದೋ ಉಧೋ ಎಂದು ಘೋಷಣೆ ಕೂಗುತ್ತಾ ಭಕ್ತಿ ಸಮರ್ಪಿಸಿದರು.ಪಾದಗಟ್ಟೆಯ ಹತ್ತಿರ ಯುಗಾದಿ ಪಾಡ್ಯ ಓಕಳಿ ಉತ್ಸವ ಕಾರ್ಯಕ್ರಮ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.ಊರಿನ ಮುಖಂಡರಾದ ಹನುಮಂತಪ್ಪ ಮಾತನಾಡಿ ದೂರದ ಊರುಗಳಿಂದ ಬರುವ ಭಕ್ತಾಧಿಗಳಿಗೆ ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನದ ವತಿಯಿಂದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಾರಿಗೆ ವ್ಯವಸ್ಥೆ,ವಿದ್ಯುತ್ ದೀಪ, ಸಿ. ಸಿ. ರಸ್ತೆ, ಯಾವುದೇ ಅಹಿತಕರ ಘಟನೆಗಳು ಆಗದಂತೆ ತಾತ್ಕಾಲಿಕ ಪೊಲೀಸ್ ಠಾಣೆ, ಅರೋಗ್ಯ ಸೇವೆಯನ್ನು ಸ್ಥಳದಲ್ಲಿ ಬೀಡು ಬಿಟ್ಟು ಮುಂಜಾಗೃತವಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು. ಈ ಜಾತ್ರೆಗೆ 4 ಜನ ವೃತ್ತನಿರೀಕ್ಷಕರು,10 ಜನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳು,190 ಜನ ಹೆಚ್ ಸಿ/ಪಿ ಸಿ,90 ಹೋಮ್ ಗಾರ್ಡ್ ಗಳು, ಒಟ್ಟು 294 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪಿ. ಎಸ್. ಐ. ಎ. ಕಿರಣ್ ಕುಮಾರ್ ತಿಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸ್. ನಿಂಗಮ್ಮ ಹನುಮಂತಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಭರಮಣ್ಣ, ರಹಮತ್ ಉಲ್ಲಾ, ಸಿದ್ದಣ್ಣ, ಪಿ. ಡಿ. ಓ. ಪರಮೇಶ್ವರಪ್ಪ, ಬಿಲ್ ಕಲೆಕ್ಟರ್ ಸ್ವಾಮಿ, ಪೊಲೀಸ್ ಇಲಾಖೆಯವರು, ಅರೋಗ್ಯ ಇಲಾಖೆಯವರು ಹಾಗೂ ದೇವಸ್ಥಾನದ ಕಮಿಟಿಯವರು ದೇವಸ್ಥಾನದ ಹತ್ತಿರ ಹಾಜರಿದ್ದರು.