ಉಚ್ಚಂಗಮ್ಮದೇವಿಗೆ ವಿಶೇಷ ಪೂಜೆ

ಚಿತ್ರದುರ್ಗ. ಏ.೧೮:ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ  ನಿಖಿಲ ಅವರಿಗೆ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದು, ಪ್ರಾಥಮಿಕ ವರದಿಯು ಪಾಸಿಟಿವ್ ಬಂದಿದೆ ಎಂಬ ವೈದ್ಯರ ಸಲಹೆ ಮೇರೆಗೆ ನಿಖಿಲ ಸೈನ್ಯ ಸಮಿತಿ ಚಿತ್ರದುರ್ಗ ವತಿಯಿಂದ ಇವರುಗಳು ಬೇಗನೆ ಗುಣಮುಖರಾಗಲಿ ಎಂದು ಚಿತ್ರದುರ್ಗ ನಗರದ ರಾಜವೀರ ಉತ್ಸವಾಂಭ ದೇವಸ್ಥಾನದಲ್ಲಿ ಶ್ರೀ ಉಚ್ಚಂಗಮ್ಮದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಪ್ರತಾಪ್‌ಜೋಗಿ, ನಿಖಿಲ ಸೈನ್ಯ ಸಮಿತಿ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ರ‍್ರಿಸ್ವಾಮಿ.ಹೆಚ್.ಎಸ್ (ಜಾಗ್ವರ್), ರಘು, ನಗರಾಧ್ಯಕ್ಷರಾದ ದೀಪು, ನಗರ ಉಪಾಧ್ಯಕ್ಷರಾದ ಸಂತೋಷ್, ತಿಮ್ಮೇಶ್, ಅಜಯ್, ಗಿರೀಶ್ ಇನ್ನು ಉಪಸ್ಥಿತರಿದ್ದರು.