ಉಚಿತ ಹೈಟೆಕ್ ಪಂಚಕರ್ಮ ಸದುಪಯೋಗ ಪಡೆಯಿರಿ:ಡಾ. ಮೂರ್ತಿ

ಬೀದರ:ಮಾ.22:ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆ, ಎನ್.ಕೆ ಜಾಬಶೆಟ್ಟಿ ಆಯುರ್ವೇದಿಕ್ ಕಾಲೇಜು ಬೀದರ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 21 ರಿಂದ 24 ರ ವರೆಗೆ ಬೆ. 9-30 ರಿಂದ ಸಂಜೆ 3 ರ ವರೆಗೆ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ ಹಾಗೂ ಹೈಟೆಕ್ ಪಂಚಕರ್ಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯುವೇರ್ದಿಕ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಸ್ಪತ್ರೆಯ ಡೀನ್ ಡಾ. ಎ.ಆರ್.ವಿ. ಮೂರ್ತಿ ನುಡಿದರು. ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿ “ಡಾ. ಮೂರ್ತಿಯವರು ಆಸ್ಪತ್ರೆಗೆ ಬಂದ ಮೇಲೆ ಅನೇಕ ಜನೋಪಯೋಗಿ ಶಿಬಿರಗಳನ್ನು ಹಮ್ಮಿಕೊಂಡು ಆಸ್ಪತ್ರೆಯ ಹೆಸರು ಉಳಿಸುತಿದ್ದಾರೆ. ಅಲ್ಲದೆ ಉಚಿತ ಪ್ರಕೃತಿ ಪರೀಕ್ಷಣ ಸಾಫ್ಟ್ ವೇರ್ ಚಿಕಿತ್ಸೆ, ಸೌಂದರ್ಯವರ್ಧಕ ಆಯುರ್ವೇದ ಚಿಕಿತ್ಸೆ, ವಾಸಂತಿಕ ವಮನ ಚಿಕಿತ್ಸೆ ಮಾಡುತಿದ್ದಾರೆ. ಕೇರಳದಿಂದ ಆಧುನಿಕ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಆದ್ದರಿಂದ ಈ ಶಿಬಿರದ ಉಪಯೋಗ ಫಲಾನುಭವಿಗಳು ಮಾಡಿಕೊಳ್ಳಬೇಕೆಂದು ಹಾಲಹಳ್ಳಿ ನುಡಿದರು.

       ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಿ.ಜಿ. ಶೆಟಕಾರ ಮಾತನಾಡಿ ಮೂರ್ತಿಯವರು ಈಗಾಗಲೇ ಹಲವು ದಿವಸಗಳಿಂದ ಮಕ್ಕಳಿಗಾಗಿ ಉಚಿತ ಸಿದ್ಧ ಸ್ವರ್ಣ ಪ್ರಾಶನ ಹಾಗೂ ಮಹಿಳೆಯರಿಗಾಗಿ ಉಚಿತ ಪುಂಸವನ ಕರ್ಮ ಮಾಡಲಾಗಿದೆ. ರಕ್ತದೊತ್ತಡ, ಮಧುಮೇಹ ಸೇರಿದಂತೆ ಇನ್ನಿತರ ಥೈರಾಯಿಡ್ ಪರೀಕ್ಷೆಗಾಗಿ ಕೇವಲ 2 ಸಾವಿರ ಶುಲ್ಕವಿದೆ. ಇದರಲ್ಲಿ ಎರಡು ಬಾರಿ ಪರೀಕ್ಷೆ ಮಾಡಿ ಮನೆಬಾಗಿಲಿಗೆ ವರದಿ ಪತ್ರಗಳನ್ನು ತಂದು ಕೊಡಲಾತ್ತಿದೆ. ರಕ್ತ ಸ್ಯಾಂಪಲ್ ಮನೆಗೆ ಬಂದು ತೆಗೆದುಕೊಳ್ಳುತಿದ್ದಾರೆ. ಆದ್ದರಿಂದ ಇದರ ಉಪಯೋಗ ಪಡೆದುಕೊಳ್ಳಿ ಎಂದರು.

     ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಉದಯಭಾನು ಹಲವಾಯಿ, ಉಪಾಧ್ಯಕ್ಷ ಪ್ರಭುಶೆಟ್ಟಿ ಮುದ್ದಾ, ಸದಸ್ಯ ಶಿವಶರಣಪ್ಪ ಸಾವಳಗಿ, ಸಿಬ್ಬಂದಿ ಪ್ರತಿನಿಧಿ ಡಾ. ಬ್ರಹ್ಮಾನಂದ ಸ್ವಾಮಿ ಉಪಸ್ಥಿತರಿದ್ದರು.