ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿದ ಶಾಸಕ ಲಕ್ಷ್ಮಣ ಸವದಿ

ಅಥಣಿ :ಜು.9: ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ಆರೋಗ್ಯದ ಕಡೆಗೆ ಗಮನ ನೀಡದೆ ತೊಂದರೆಗೆ ಸಿಲುಕುತ್ತಿದ್ದಾರೆ, ತಂತ್ರಜ್ಞಾನ ಬೆಳದಂತೆ ಒತ್ತಡದ ಬದುಕು ಹಾಗೂ ಬದಲಾಗುತ್ತಿರುವ ಜೀವನದ ಕ್ರಮ, ಆಹಾರ ಪದ್ದತಿ, ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದಾಗಿ ಜನಸಾಮಾನ್ಯರು ಇಂದು ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ.ತಾಲೂಕಿನ ಜನತೆಗೆ ಕೆ.ಎಲ್.ಇ. ಸಂಸ್ಥೆಯ ಬೆಳಗಾವಿಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆ ಬಡವರಿಗಾಗಿ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.

ಅವರು ಶನಿವಾರ ಇಲ್ಲಿನ ಎಸ್ ಎಸ್ ಎಮ್ ಎಸ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರದ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್ ಮತ್ತು ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಏಕೆಂದರೆ ಮನುಷ್ಯ ಬೇಗನೆ ಶ್ರೀಮಂತನಾಗಬೇಕು ಎಂಬ ದುರಾಸೆಯಿಂದ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ ಹಣ ಸಂಪಾದಿಸಿ ಅದನ್ನು ಅನುಭವಿಸಲಾಗದೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿ ತಾನು
ಗಳಿಸಿದ ಹಣಕ್ಕಿಂತ ಹೆಚ್ಚಿಗೆ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕೂಡ ಅತಿಯಾದ ರಸಾಯನಿಕ ಗೊಬ್ಬರಗಳನ್ನು ಮತ್ತು ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಅನೇಕ ರೋಗಗಳು ನಮ್ಮನ್ನು ಭಾದಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ರೈತರು ಕೂಡ ಹೆಚ್ಚಿನ ಇಳುವರಿಯ ಆಸೆಗಾಗಿ ಹೈಬ್ರಿಡ್ ತಳಿಗಳನ್ನು ಬೆಳೆಯುತ್ತಿದ್ದಾರೆ, ಹೈನುಗಾರಿಕೆಗಾಗಿ ಎ???ಫ್ ತಳಿಯ ಆಕಳುಗಳನ್ನು, ಎಮ್ಮೆಗಳನ್ನು ಸಾಕುತ್ತಿದ್ದಾರೆ. ಇವುಗಳ ಹಾಲು ಮತ್ತು ಅದರ ಉತ್ಪನ್ನಗಳನ್ನು ತಿನ್ನುವುದರಿಂದ ಆರೋಗ್ಯಕ್ಕಿಂತ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಬಡಜನರಿಗಾಗಿ ನಾಡಿನ ವಿವಿದೆಡೆಗಳಲ್ಲಿ ಉಚಿತ ಶಿಬಿರಗಳ ಮೂಲಕ ಜನಸಾಮಾನ್ಯರ ಆರೋಗ್ಯ ತಪಾಸಣೆ ನಡೆಸಿ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ಸಂದರ್ಭದಲ್ಲಿ ಡಾ. ಪ್ರಭಾಕರ್ ಕೋರಿ ಮತ್ತು ಅವರ ಆಸ್ಪತ್ರೆಯ ಎಲ್ಲಾ ವೈದ್ಯರರಿಗೆ ತಾಲೂಕಿನ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಅಥಣಿಯ ಜನಸಂಖ್ಯೆ ಬೆಳೆಯುತ್ತಿದ್ದು ಇಲ್ಲೊಂದು ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆಯಿದ್ದು, ಕೆ.ಎಲ್.ಇ. ಸಂಸ್ಥೆ ಅಥಣಿಯಲ್ಲೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಡಾ. ಪ್ರಭಾಕರ ಕೋರೆ ಅವರು ಬಿಟ್ಟ ಹೆಜ್ಜೆಗೆ ನೆಟ್ಟು ಕೆಲಸ ಆರಂಭಿಸಿದರೆ ಸ್ಥಳೀಯ ಶಾಸಕನಾಗಿ ನಾನು ಕೂಡ ಅದಕ್ಕೆ ಅಗತ್ಯ ಸಹಾಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾದ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ ಅವರು, ಕೆ.ಎಲ್.ಇ. ಸಂಸ್ಥೆಯ ಆಸ್ಪತ್ರೆಯಲ್ಲಿ ಬಡಜನರ ಅನುಕೂಲಕ್ಕಾಗಿ ಹಲವಾರು ಯೋಜನೆಗಳ ಮೂಲಕ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಕೆಎ??? ಬೆಳಗಾವಿ ಆಸ್ಪತ್ರೆಯಲ್ಲಿ ಇತ್ತೀಚಿಗೆ ಸುಮಾರು 10 ಕೋಟಿ ರೂಪಾಯಿ ವೆಚ್ಚದ ಪಾಶ್ರ್ವವಾಯು ( ಲಕ್ವಾ ) ಚಿಕಿತ್ಸೆಗಾಗಿ ಹೈಟೆಕ್ ಮಾದರಿಯ ಮಷೀನ್ ಅಳವಡಿಸಿದ್ದಾರೆ, ಲಕ್ವ ಹೊಡೆದ ಆರು ಗಂಟೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದರೆ ಮತ್ತೆ ಮೊದಲಿನಂತೆ ಸಂಪೂರ್ಣ ಗುಣಮುಖರಾಗುತ್ತಾರೆ. ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ನೂತನ ಶಾಸಕರಾಗಿ ಪುನರಾಯ್ಕೆಗೊಂಡ ಲಕ್ಷ್ಮಣ ಸವದಿ ಅವರನ್ನು ಕೆ.ಎಲ್.ಇ. ಸಂಸ್ಥೆಯ ಸಾನಿಕ ಆಡಳಿತ ಮಂಡಳಿಯ ಪರವಾಗಿ ಸತ್ಕರಿಸಲಾಯಿತು.
ಶಿಬಿರದಲ್ಲಿ ಸು. 250ಕ್ಕೂ ಅಧಿಕ ಹೃದಯ ರೋಗಿಗಳ ತಪಾಸಣೆ ನಡೆಸಲಾಯಿತು, ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಮೋಹನ ಗ್ಯಾನ, ಡಾ. ಪಾಶ್ರ್ವನಾಥ ಪಾಟೀಲ, ಡಾ. ರಂಜೀತ ನಾಯಿಕ, ಡಾ. ಸುಹಾಸಿನಿ, ಡಾ. ಚಂದ್ರಕಾoತ ಕೋರೆ, ಡಾ. ಅನ್ಶಜ, ಡಾ. ಸುಶ್ಮಿತಾ ಅವರು ತಪಾಸಣೆ ನಡೆಸಿ ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ಕೆ.ಎಲ್.ಇ. ಆಸ್ಪತ್ರೆಯ ಹೃದಯರೋಗ ತಜ್ಞ ಮೋಹನ ಗ್ಯಾನ, ಅಥಣಿ ಐ.ಎಂ.ಎ, ಅಧ್ಯಕ್ಞೆ ಡಾ. ಸ್ಮಿತಾ ಚೌಗುಲಾ, ಸಿ.ಎಸ್.ಕಿತ್ತೂರ ಪ್ರೌಢಶಾಲೆಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾದ್ಯಕ್ಷ ಅಲ್ಲಪ್ಪ ನಿಡೊಣಿ, ಪ್ರಾಚಾರ್ಯ ಬಿಎಸ್ ಕಾಂಬಳೆ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ, ಎಸ್.ಜಿ .ಮಮದಾಪೂರ, ಶಿವು ಹಂಜಿ, ಅಶೋಕ ಬುರ್ಲಿ, ವಿಜಯ ಬುರ್ಲಿ, ಪ್ರಕಾಶ ಪಾಟೀಲ, ಅನೀಲ ಮೆಣಸಿ, ಶ್ರೀಶೈಲ ಸಂಕ, ಕೆ.ಎಲ್.ಇ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಮೋದ ಸುಳಿಕೇರಿ, ಸ್ಥಳೀಯ ಕೆ.ಎಲ್.ಇ. ಅಂಗಸoಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು. ಪ್ರಾಚಾರ್ಯ ಡಾ. ಬಿ.ಎಸ್.ಕಾಂಬಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪೆÇ್ರ. ಸೌಮ್ಯ ಡಿ. ಕಾರ್ಯಕ್ರಮ ನಿರೂಪಿಸಿದರು. ಪೆÇ್ರ. ಕೆ.ಎಂ.ಅಚ್ಯುತಾನoದ ವಂದಿಸಿದರು.


ಮಿದುಳಿನ ಪಾಶ್ರ್ವವಾಯು (ಲಾಕ್ವಾ) ಪೀಡಿತರಿಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿದ ಚಿಕಿತ್ಸಾ ಸೌಲಭ್ಯ,

ಕೆಎಲ್‍ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಿದುಳಿನಲ್ಲಿ ಉಂಟಾಗುವ ಪಾಶ್ರ್ವವಾಯುವಿನಿಂದ ರಕ್ತನಾಳಗಳ ಮುದುಡುವಿಕೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸುಮಾರು 10 ಕೋಟಿ ರೂಗಳ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿದ ಚಿಕಿತ್ಸಾ ಸೌಲಭ್ಯವನ್ನು ಪ್ರಾರಂಭಿಸಿದ್ದು ಮೆದುಳಿನ ಪಾಶ್ರ್ವವಾಯು (ಲಕ್ವಾ ) ಪೀಡಿತ ವ್ಯಕ್ತಿ ಪೀಡಿತರಾದ 6 ಗಂಟೆಗಳೊಳಗೆ ಕೆಎ??? ಆಸ್ಪತ್ರೆಗೆ ದಾಖಲಾದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಇದು ರೋಗಿಗಳನ್ನು ಶೀಘ್ರವೇ ಗುಣಮುಖಗೊಳಿಸುವಲ್ಲಿ ಸಹಕಾರಿಯಾಗಲಿದೆ,
ದಿನದ 24 ಗಂಟೆ ಇದರ ಸೇವೆ ಲಭಿಸುತ್ತದೆ, ಅಥಣಿ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು.

     - ಲಕ್ಷ್ಮಣ ಸವದಿ, ಶಾಸಕರು ಅಥಣಿ,