
ಸಿರಾ, ಜು. ೮- ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತ ಸಿಇಟಿ ತರಬೇತಿ ತರಗತಿಗಳಿಗೆ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಚಾಲನೆ ನೀಡಿದರು.
ಕಳೆದ ಕೆಲ ದಿನಗಳ ಹಿಂದೆ ಈ ಸರ್ಕಾರಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಚಿತವಾಗಿ ಸಿಇಟಿ ತರಬೇತಿ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದೆ ಅದರಂತೆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಸಿಇಟಿಗೆ ಸಂಬಂಧಿಸಿದ ಸುಮಾರು ೩೫೦೦ ರೂ.ಮೌಲ್ಯದ ೪ ಉಚಿತ ತರಬೇತಿ ಪುಸ್ತಕ ನೀಡಿದರು.
ನಂತರ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಹಂತದಲ್ಲಿ ಗಮನವಿಟ್ಟು ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಕಷ್ಟಪಟ್ಟು ಶ್ರದ್ದೆಯಿಂದ ಕಲಿಯಬೇಕು. ನೀವು ಜೀವನದಲ್ಲಿ ಅತ್ಯುತ್ತಮ ಮಟ್ಟಕ್ಕೇರಿ ಈ ತಾಲ್ಲೂಕಿಗೆ ಕೀರ್ತಿ ತರಬೇಕೆಂಬುದು ನನ್ನ ಮಹಾದಾಸೆಯಾಗಿದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಇಂತಹ ಶಿಕ್ಷಣ ಪಡೆದು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಾಟಿ ಇಲ್ಲದಂತೆ ಭಾಗವಹಿಸಿ ಉತ್ತಮ ಅಂಕ ಪಡೆದು ವೈದ್ಯಕೀಯ, ಇಂಜಿನಿಯರ್, ತೋಟಗಾರಿಕೆ ಎಂತಹ ಉನ್ನತ ಶಿಕ್ಷಣ ಪಡೆದು ಸೇವೆ ಸಲ್ಲಿಸಬೇಕು. ಆದ್ದರಿಂದ ನಮ್ಮ ಪ್ರೆಸಿಡೆನ್ಸಿ ಕಾಲೇಜಿನ ನುರಿತ ಶಿಕ್ಷಕರಿಂದಲೂ ಸಹ ಪ್ರತೀ ದಿನ ಬೆಳಗ್ಗೆ ೯:೦೦ ರಿಂದ ೧೦ ಗಂಟೆವರೆಗೆ ನಿಮ್ಮೆಲ್ಲರಿಗೂ ಉಚಿತ ಸಿಇಟಿ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೊ. ಜಯರಾಮಯ್ಯ, ಪ್ರಾಂಶುಪಾಲರಾದ ಚಂದ್ರಯ್ಯ, ಉಪನ್ಯಾಸಕ ಪರಮೇಶ್, ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್ಯ ಸುಬ್ರಮಣಿ, ತಾ.ಪಂ. ಮಾಜಿ ಸದಸ್ಯ ಚಿಕ್ಕಣ್ಣ, ಪ್ರೊ. ಜಯರಾಮಯ್ಯ, ಪ್ರಾಂಶುಪಾಲರಾದ ಚಂದ್ರಯ್ಯ, ಉಪನ್ಯಾಸಕ ಪರಮೇಶ್, ಪ್ರೆಸಿಡೆನ್ಸಿ ಕಾಲೇಜಿನ ಪ್ರಾಂಶುಪಾಲರಾದ ಸುಬ್ರಮಣಿ, ತಾ.ಪಂ. ಮಾಜಿ ಸದಸ್ಯ ಚಿಕ್ಕಣ್ಣ, ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.