ಉಚಿತ ಸಾಮೂಹಿಕ ಸುನ್ನತೆ ಇಬ್ರಾಹಿಂ (ಖತ್ನಾ) ಕಾರ್ಯಕ್ರಮ ಯಶಸ್ವಿ

ಅಥಣಿ :ಏ.25: ಅಥಣಿ ಮೈನಾರಿಟಿ ಸೋಷಿಯಲ್ ಆಂಡ್ ವೆಲ್ ಫೇರ್ ಕಮಿಟಿ ವತಿಯಿಂದ
ಪಟ್ಟಣದ ಎ ಕೆ ಹೈಸ್ಕೂಲಿನ ಆವರಣದಲ್ಲಿರುವ ಶಾದಿಮಹಲನಲ್ಲಿ ಮುಸ್ಲಿಂ ಬಾಂಧವರ ಮಕ್ಕಳಿಗಾಗಿ ಸಾಮೂಹಿಕ ಸುನ್ನತೆ ಇಬ್ರಾಹಿಂ (ಖತ್ನಾ) ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಮಕ್ಕಳಿಗೆ ಸುನ್ನತೆ ಇಬ್ರಾಹಿಂ (ಖತ್ನಾ) ಮಾಡಲಾಯಿತು. ಸುನ್ನತೆ ಇಬ್ರಾಹಿಂ (ಖತ್ನಾ) ಮಾಡಿಸಿಕೊಂಡ ಮಕ್ಕಳಿಗೆ ಹಣ್ಣು, ಔಷಧ, ಉಚಿತವಾಗಿ ಕಮಿಟಿ ವತಿಯಿಂದ ನೀಡಲಾಯಿತು. ಅಥಣಿ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಮುಸ್ಲಿಂ ಬಂಧುಗಳ ಪಾಲಕರು ಸುಮಾರು 150 ಕ್ಕೂ ಅಧಿಕ ಮಕ್ಕಳನ್ನು ಕರೆದುಕೊಂಡು ಬಂದಿದ್ದರು.
ಈ ವೇಳೆ ಅಥಣಿ ಮೈನಾರಿಟಿ ಸೋಷಿಯಲ್ ಆಂಡ್ ವೆಲ್ ಫೇರ್ ಕಮಿಟಿ ಅಧ್ಯಕ್ಷ ಅಯ್ಯಾಜ ಮಾಸ್ಟರ್ ಮಾತನಾಡಿ ಭಗವಂತನ ಆದೇಶದ ಮೇರೆಗೆ ಹಜರತ್ ಇಬ್ರಾಹಿಂ ಖಲೀಲುಲ್ಲಾರವರು ಇಸ್ಲಾಂ ಧರ್ಮದ ಪ್ರಕಾರ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯು ಸುನ್ನತೆ ಇಬ್ರಾಹಿಂ (ಖತ್ನಾ) ಮಾಡಿಸಿಕೊಳ್ಳುವುದು ಕಡ್ಡಾಯ ಆಚರಣೆಯಾಗಿದೆ ಎಂದಿದ್ದರು. ಈ ಆಚರಣೆಯನ್ನು ನಡೆಸಲು ಅರ್ಥಿಕವಾಗಿ ಹಿಂದುಳಿದ ಬಡ ಮುಸ್ಲಿಂ ಬಾಂಧವರಿಗೆ ಬಹಳ ಕಷ್ಟ ಸಾಧ್ಯವಾಗಿರುತ್ತದೆ, ಇಂತಹವರಿಗೆ ನೆರವಾಗಲು ಉಚಿತವಾದ ಸುನ್ನತೆ ಇಬ್ರಾಹಿಂ (ಖತ್ನಾ) ಕಾರ್ಯಕ್ರಮವನ್ನು 12 ವರ್ಷಗಳಿಂದ ಹಮ್ಮಿಕೊಂಡು ಬರಲಾಗುತ್ತಿದೆ. ಈ ವರ್ಷ ದೇವರ ಕೃಪೆಯಿಂದ ಸುಮಾರು 150 ಕ್ಕೂ ಅಧಿಕ ಮಕ್ಕಳಿಗೆ ಉಚಿತ ಸುನ್ನತೆ ಇಬ್ರಾಹಿಂ (ಖತ್ನಾ) ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಈ ವೇಳೆ ಸೈಯದ್ ಮುಜಾವರ. ಮುಸ್ಲಿಂ ಧರ್ಮ ಗುರುಗಳಾದ ಮೌಲಾನಾ ಜುಬೇರ್ ಮೌಲಾನಾ ಆಶೀಫ್ ಪಟಾಯಿತ್. ಸಮಾಜದ ಮುಖಂಡರಾದ ಅಸ್ಲಮ್ ನಾಲಬಂದ. ಆಬೀದ ಮಾಸ್ಟರ್. ಸೈಯದ್ ಗಡ್ಡೇಕರ. ಯಾಸೀನ್ ಸಾತಬಚ್ಚೆ. ಶಬ್ಬೀರ್ ಸಾತಬಚ್ಚೆ. ಯೂಸುಫ್ ಮುಲ್ಲಾ. ರಿಯಾಜ್ ಬಾಗವಾನ. ಜಹಾಂಗೀರ ಐಗಳಿ. ಅಜರ್ ಮುಲ್ಲಾ. ಉಮರ ಮುಲ್ಲಾ. ಫಯಾಜ್ ಶೇಖ. ಮಲೀಕ ತೇರದಾಳ. ಮೈನೋದ್ದೀನ್ ಮಲಂಗ. ಸೇರಿದಂತೆ ಹಲವರು ಉಪಸ್ಥಿತರಿದ್ದರು.