ಉಚಿತ ಸಾಮೂಹಿಕ ವಿವಾಹ ವರಲಕ್ಷ್ಮಿ ಪೂಜೆನನ್ನ ನಂಬಿದವರಿಗೆ ಎಂದೂ ಮೋಸ ಮಾಡಲ್ಲ: ಜನಾರ್ಧನರೆಡ್ಡಿ

(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಅ,25- ನನ್ನ ನಂಬಿದವರಿಗೆ ಎಂದೂ ನಾನು ಮೋಸ ಮಾಡಲ್ಲ. ನನ್ನ ಜನ್ಮ ಇರುವವರೆಗೆ ಬಳ್ಳಾರಿ ಅಭಿವೃದ್ಧಿಯೇ ನನ್ನ ಕನಸು. ನನಗೆ ಕುತಂತ್ರ ಮಾಡಲು ಹೋದವರೆಲ್ಲ ಮನೆಯಲ್ಲಿ ಕುಳಿತಿದ್ದಾರೆಂದು ಗಂಗಾವತಿ ಶಾಸಕ, ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹೇಳಿದರು.ಅವರು ಇಂದು ನಗರದ ಹವಂಬಾವಿಯ ತಮ್ಮ‌ ನಿವಾಸದ ಬಳಿಯ ಮೈದಾನದಲ್ಲಿ ಕೆಆರ್ಪಿ ಪಕ್ಷ ಹಾಗು ಲಕ್ಷ್ಮೀ ಅರುಣಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವರ ಮಹಾಲಕ್ಷ್ಮಿ ಪೂಜೆ ಮತ್ತೆ 35 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವರ್ಚವಲ್ ಮೂಲಕ ಮಾತನಾಡಿದರು.ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ಬಳ್ಳಾರಿಯಿಂದ ದೂರಾಗಿರುವೆ. ಆದರೂ  ನಾನು ಯಾರನ್ನು ಬೆಳಸಿತ್ತು. ಒಂದೇ ಕುಟುಂಬ ಎಂದು ಕೊಂಡಿದ್ದೆ ಅವರು ನನಗೆ ಸಹಕರಿಸದ ಕಾರಣ ಕಳೆದ ಚುನಾವಣೆಯಲ್ಲಿ ಅವರಿಗೆ ಜನತೆ ಪಾಠಕಲಿಸಿದ್ದಾರೆ.  ಲಕ್ಷ್ಮೀ ಅರುಣಾ ಅವರನ್ನು ಸೋಲಿಸಲು ಹೋಗಿ ಅವರೆಲ್ಲ ಮನೆಯಲ್ಲಿ ಕೂತಿದ್ದಾರೆ. ನನ್ನ ನಂಬಿದವರಿಗೆ ಎಂದೂ ಮೋಸ ಮಾಡಲ್ಲ ಎಂದರು.ನಗರದ ಅಭಿವೃದ್ಧಿಗೆ ಪ್ರತಿ ಪಕ್ಷವಾಗಿ ನಾವು ಕೆಲಸ ಮಾಡಲಿದ್ದೇವೆ. 1999 ರಿಂದ ನಡೆದುಕೊಂಡು ಬಂದಿದ್ದ ವರ ಮಹಾಲಕ್ಷ್ಮೀ ಪೂಜೆ, ಸಾಮೂಹಿಕ ವಿವಾಹ ನಿಂತಿತ್ತು. ನನ್ನ ಪತ್ನಿ ತಮ್ಮ ನೇತೃತ್ವದಲ್ಲಿ ಪುನಃ ಆರಂಭಿಸಿದ್ದಾರೆ ಇದು   ನಿರಂತರವಾಗಿ ಸಾಗಲಿದೆಂದರು.ಪರಸ್ಪರ ಅರ್ಥಮಾಡಿಕೊಳ್ಳಿ:ಲಕ್ಷ್ಮಿ ಅರುಣಾ ಮಾತನಾಡಿ, ಸುಷ್ಮಾ ಸ್ವರಾಜ್ ಅವರು ಈ ಹಿಂದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವ ಮೂಲಕ ಅಂದು ಕೈಗೊಂಡ ಗಟ್ಟಿ ನಿರ್ಧಾರ ಇಂದಿಗೂ ಮುಂದುವರಿದಿದೆ. ರಾಜಕೀಯ ಕುತಂತ್ರದಿಂದ ಜನಾರ್ದನ ರೆಡ್ಡಿ ಅವರನ್ನು ಸಿಲುಕಿಸಿದ ಕಾರಣ 12 ವರ್ಷ ಕಾಲ ನಿಂತಿತ್ತು. ಈಗ ಪುನಃ ಆರಂಭವಾಗಿದ್ದು ಈಗ  ನಿರಂತರವಾಗೊ ಸಾಗುತ್ತದೆ. ನೂತನ ದಂಪತಿಗಳು ಪರಸ್ಪರ ಅರ್ಥಮಾಡಿಕೊಂಡು ಉತ್ತಮ ಜೀವನ ನಡೆಸಬೇಕು. ನೋವು, ಕಷ್ಟ, ಸೋಲುಗಳು ಸಮುದ್ರದ ಅಲೆಯಂತೆ ಬರುವುದು ಸಾಮಾನ್ಯ. ಅವುಗಳನ್ನು ಎದುರಿಸಿ ದಿಟ್ಟವಾಗಿ ನಿಲ್ಲಬೇಕು. ಹೊಸ ಜೀವನಕ್ಕೆ ಕಾಲಿಡುತ್ತಿರುವ ನೂತನ ದಂಪತಿ ತಾಳ್ಮೆಯನ್ನು ಅನುಸರಿಸಬೇಕು. ಚುನಾವಣೆ ಸಮಯದಲ್ಲಿ ಪುತ್ರಿ ಬ್ರಹ್ಮಿಣಿ ಅವರು ಮೊದಲ ಬಾರಿಗೆ ತಂದೆ, ತಾಯಿಗೋಸ್ಕರ ಹೊರಬಂದು ಸಾಕಷ್ಟು ಕಾರ್ಯನಿರ್ವಹಿಸಿದ್ದಾರೆ. ಸೋಲು-ಗೆಲುವು ಏನೇ ಇದ್ದರು ನಾವು ಬಳ್ಳಾರಿ ಅಭಿವೃದ್ಧಿಗೆ ಸದಾ ಸಿದ್ಧ ಎಂದರು.ಕಲ್ಯಾಣ ಸ್ವಾಮೀಜಿ ನೂತನ ವಧು ವರರಿಗೆ ಆಶಿರ್ವದಿಸಿ, ಜನಾರ್ಧನರೆಡ್ಡಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು.ಕಾರ್ಯಕ್ರಮದಲ್ಲಿ ಜನಾರ್ಧನರೆಡ್ಡಿ ಪುತ್ರಿ ಬ್ರಹ್ಮಿಣಿ ರಾಜೀವರೆಡ್ಡಿ,  ಪಾಲಿಕೆ ಸದಸ್ಯರಾದ ಕಲ್ಪನಾ ವೆಂಕಟರಾಮರೆಡ್ಡಿ,  ಕೋನಂಕಿ ತಿಲಕ್, ಪಕ್ಷದ ಮುಖಂಡರಾದ  ಬಿ.ವಿ.ಶ್ರೀನಿವಾಸರೆಡ್ಡಿ, ಗೋನಾಳ್ ರಾಜಶೇಖರಗೌಡ, ವೆಂಕಟರಮಣ, ಕೆ.ಎಸ್.ದಿವಾಕರ್ ಮೊದಲಾದವರು ನೂತನ ವಧು ವರರನ್ನು ಆಶಿರ್ವದಿಸಿದರು.ಸಂಜಯ್ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.ಬಳ್ಳಾರಿಯಲ್ಲಿ  ಚುನಾವಣೆಯನ್ನು ಎದುರಿಸಿದ ನಮ್ಮ ಪಕ್ಷದ ಕಾರ್ಯಕರ್ತರಿಗೆ. ಇಲ್ಲಿ ಗೆದ್ದಿರುವ ಶಾಸಕರು, ಸಚಿವರ ಕಡೆಯಿಂದ  ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹಾಗೆ ಮುಂದುವರಿಸಿದರೆ  ವಿಧಾನಸೌದದ ಮುಂದೆ ಹೋರಾಟ ಮಾಡಬೇಕಾಗುತ್ತದೆ. ಚುನಾವಣೆ ಆದ ಮೇಲೆ ಎಲ್ಲರೂ ಒಂದೇ ಎಂದು ಭಾವಿಸಬೇಕು. ಹೆದರಿಸುವ ಕೆಲಸ ಆದರೆ ಎಚ್ಚರಿಕೆ ಎಂದು ಹೆಸರೇಳದೆ ಸಚಿವ ನಾಗೇಂದ್ರ ಮತ್ತು ಶಾಸಕ ಭರತ್ ರೆಡ್ಡಿ ಅವರಿಗೆ ಹೇಳಿದರು.ಶಾಸಕ ಭರತ್ ರೆಡ್ಡಿ ಅವರಿಗೆ ಹೇಳಿದರು.
One attachment • Scanned by Gmail