ಉಚಿತ ಶ್ರವಣ ಯಂತ್ರದ ಲಾಭ ಇನ್ನು ಹೆಚ್ಚಿನ ಫಲಾನುಭವಿಗಳಿಗೆ ದೊರೆಯುವಂತಾಗಲಿ:ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ

ಬೀದರ, ಜೂ. 23: ಕೇಂದ್ರ ಸರ್ಕಾರ ಯೋಜನೆಯಡಿ ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಜಿಲ್ಲೆಯ ಶ್ರವಣ ದೋಷಿಗಳಿಗೆ ಉಚಿತ ಶ್ರವಣಯಂತ್ರ ವಿತರಣೆ ಮಾಡುತ್ತಿರುವುದು ಸಂತಸ ತಂದಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಫಲಾನುಫವಿಗಳಿಗೆ ಇದರ ಲಾಭ ದೊರೆಯುವಂತಾಗಲಿ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಅವರು ಗುರುವಾರ ಬೀದರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎನ್‍ಪಿಪಿಸಿಡಿ ಕಾರ್ಯಕ್ರಮದಡಿ ಅಲಿಯವರ ಜಂಗ್ ನ್ಯಾಷನಲ್ ಇನ್ಸಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಡಿಸೆಬಲಿಟಿ ಸೆಂಟರ್ ಸಿಕಿಂದ್ರಾಬಾದ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಎಡಿಪಿಐ ಯೋಜನೆಯಡಿ ಉಚಿತ ಶ್ರವಣ ಯಂತ್ರ ವಿತರಣಾ ಶಿಬಿರ ಉದ್ಘಾಟಿಸಿ ಫಲಾನುಭವಿಗಳಿಗೆ ಶ್ರವಣ ಯಂತ್ರ ವಿತರಿಸಿ ಮಾತನಾಡಿದರು. ಶ್ರವಣ ದೋಷದಿಂದ ಮಕ್ಕಳ ವ್ಯಕ್ತಿವ್ಯ ವಿಕಸನಕ್ಕೆ ಅಡ್ಡಿಯಾಗುವ ಸಾದ್ಯತೆ ಇರುತ್ತದೆ. ಆದರೆ ಈ ಶ್ರವಣ ಯಂತ್ರವು ಅವರ ಉನ್ನತ ಭವಿಷ್ಯಕ್ಕೆ ನಾಂದಿಯಾಗಲಿದೆ. ಈ ಶ್ರವಣ ಯಂತ್ರವನ್ನು ಪಡೆದ ಎಲ್ಲರು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಬೇಕು ಕೆಲವರಿಗೆ ಉಚಿತವಾಗಿ ದೊರೆತ ವಸ್ತುಗಳ ಬಗ್ಗೆ ಹೆಚ್ಚು ಕಾಳಜಿ ಇರುವುದಿಲ್ಲ. ಆದರಿಂದ ನಿಮಗೆ ನೀಡಿದ ಈ ಯಂತ್ರದ ಸರಿಯಾದ ಲಾಭವನ್ನು ಪಡೆಯಬೇಕೆಂದ ಅವರು ಪೋಷಕರು ತಮ್ಮ ಮಕ್ಕಳಲ್ಲಿ ಇಂತಹ ಸಮಸ್ಯೆ ಕಂಡುಬಂದಲ್ಲಿ ಸರ್ಕಾರಿ ಆಸ್ಪತ್ರೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ ಮಾತನಾಡಿ, ಹುಟ್ಟಿದ ಮೂರು ವರ್ಷಗಳ ನಂತರ ಮಕ್ಕಳ ಬುದ್ಧಿ ಬೆಳವಣಿಗೆ ಆರಂಭವಾಗುತ್ತದೆ ಆದರಿಂದ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಯಾವುದಾದರು ದೋಷವಿದೆ ಎಂಬುದನ್ನು ಪೋಷಕರು ಗಮನಿಸಬೇಕು ಅವರಲ್ಲಿ ಶ್ರವಣ ದೋಷ ಕಂಡುಬಂದಲ್ಲಿ ತಕ್ಷಣ ಪೆÇೀಷಕರು ಚಿಕಿತ್ಸೆ ಕೊಡಿಸಬೇಕು ಇಲ್ಲದಿದ್ದರೆ ಅವರ ಬುದ್ದಿ ಬೆಳವಣಿಗೆಗೆ ತೊಂದರೆಯಾಗುತ್ತದೆ ಆದರಿಂದ ಪೆÇೀಷಕರು ನಿರ್ಲಕ್ಷ್ಯತೆ ತೊರಬಾರದು ಎಂದರು.

ಜಿಲ್ಲೆಯಲ್ಲಿರುವ 77 ಶ್ರವಣ ದೊಷಿಯರಿಗೆ ಗುರುತಿಸಿ ಇಂದು 174 ಶ್ರವಣ ಯಂತ್ರ ನೀಡಲಾಗುತ್ತಿದೆ ಇದಕ್ಕೆ ಸಿಕಿಂದ್ರಾಬಾದ ಅಲಿಯವರ ಜಂಗ್ ಸಂಸ್ಥೆಯವರು ನಮಗೆ ಸಹಕಾರ ನೀಡಿದ್ದಾರೆ ಎಂದ ಅವರು ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಪೀಚ್ ಆಯ್ದ ಹಿಯರಿಂಗ್ ಸೆಂಟರ್ ಇದ್ದು ಇದರ ಲಾಭ ಜಿಲ್ಲೆಯ ನಾಗರಿಕರು ಪಡೆಯಬೇಕೆಂದರು.

ಬೀದರ ಬ್ರೀಮ್ಸ್‍ನ ಜಿಲ್ಲಾ ಶಸ್ತ್ರಚಿಕಿತ್ಸಕ ಮಹೇಶ ಬಿರಾದಾರ ಮಾತನಾಡಿ, ಕೆÀಲವರಿಗೆ ಶ್ರವಣ ದೋಷಕ್ಕೆ ಚಿಕಿತ್ಸೆ ಇದೆ ಎನ್ನುವ ಬಗ್ಗೆ ಮಾಹಿತಿ ಇರುವುದಿಲ್ಲ ಮತ್ತು ಕೆಲವರು ಮೂಡನಂಬಿಕೆಗೆ ಬಲಿಯಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವುದಿಲ್ಲ ಪ್ರಸ್ತುತ ಬೀದರ ಜಿಲ್ಲಾ ಆರೋಗ್ಯ ಇಲಾಖೆಯು ಜಿಲ್ಲೆಯ ಜನತೆಗೆ ಶ್ರವಣ ದೋಷದ ಚಿಕಿತ್ಸೆಯ ಬಗ್ಗೆ ಮಾಹಿತಿಯ ಜೊತೆಗೆ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದರು. ಅಲಿಯವರ ಜಂಗ್ ನ್ಯಾಷನಲ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಸಿಕಿಂದ್ರಾಬಾದನ ಉಪನ್ಯಾಸಕ ಗೌರಿಶಂಕರ ಮಾತನಾಡಿ, ನಮ್ಮ ಸಂಸ್ಥೆಯು ದೇಶದ ಯಾವ ಮೂಲೆಯವರೆಗೆ ನಾವು ತಲುಪಲು ಸಾಧ್ಯವೋ ಅಲ್ಲಿಯವರೆಗೆ ನಮ್ಮ ಸೇವೆಯನ್ನು ನೀಡುವ ಗುರಿ ಇದೆ ನಮ್ಮ ಸಂಸ್ಥೆಯು ದೇಶದಲ್ಲಿ ಶ್ರವಣ ಮುಕ್ತ ನಾಗರಿಕರನ್ನು ಸೃಷ್ಠಿಸುವ ಗುರಿ ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ.ಬಿ, ಬೀದರನ 100 ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಸೋಹೆಲ್ ಅಹಮದ್, ಎಚ್‍ಓಡಿ ಇಎನ್‍ಟಿ ಬ್ರೀಮ್ಸ್ ಸುಮಂತ ಕಣಜಿಕರ್, ತಾಲ್ಲೂಕ ಆರೋಗ್ಯ ಅಧಿಕಾರಿ ಸಂಗಾರೆಡ್ಡಿ, ಇಎನ್‍ಟಿ ತಜ್ಞ ನಿಶಾ ಕೌರ್, ಶ್ರವಣಶಾಸ್ತ್ರಜ್ಞ ಡಾ. ವೆಂಕಟರಾಮನ್, ಶಿವಾನಂದ ಹಿರೆಮಠ, ಬಿಲಾಲ್, ಸೋಹೆಲ್, ಮುದಾಸೀರ್, ಶ್ರವಣ ದೋಷ ಫಲಾನುಭವಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.