ಹುಬ್ಬಳ್ಳಿ,ಮೇ30: ಶ್ರೀ ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿಯ ಆಶ್ರಯದಲ್ಲಿ ಅಸ್ಟರ್ ಫಾರ್ಮಸಿ, ಹುಬ್ಬಳ್ಳಿ ಇವರ ವತಿಯಿಂದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಕಾರ್ಯಾಲಯದ ಮುಂದುಗಡೆ ಭಕ್ತರಿಗೆ, ಸಾರ್ವಜನಿಕರಿಗೆ ಹಾಗೂ ಶ್ರೀಮಠದ ಸಿಬ್ಬಂದಿಗಳಿಗೆ ಉಚಿತ ರಕ್ತದ ಒತ್ತಡ, ಶುಗರ್ ಟೆಸ್ಟ್ ಹಾಗೂ ಕಣ್ಣಿನ ತಪಸಣಾ ಶಿಬಿರವನ್ನು ಆಯೋಜಿಸಲಾಯಿತು.