ಉಚಿತ ಶಿಬಿರ ಸದುಪಯೋಗವಾಗಲಿ : ಘನಶಂಕರ್

ಹಿರಿಯೂರು.ಮಾ.25: ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಉಚಿತ ಆರೊಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯೂರು  ಬಿಇಟಿ ಯುರೋಕಿಡ್ಸ್ ಶಾಲೆಯ ಸಂಸ್ಥಾಪಕರಾದ ಘನಶಂಕರ್ ಹೇಳಿದರು. ಶಾಲೆಯ ಆವರಣದಲ್ಲಿ ಚಳ್ಳಕೆರೆಯ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.  ಶಿಬಿರದಲ್ಲಿ ಮಂಡಿನೋವು ಭುಜನೋವು ಸೊಂಟನೋವು ಮೂಲವ್ಯಾಧಿ ಪಿಸ್ತೂಲ ಫಿಶರ್ ನಂತಹ ವಿಚಾರಗಳಿಗೆ ತಜ್ಞ ವೈದ್ಯರು ಸೂಕ್ತ ಸಲಹೆ ನೀಡಿದರು. ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಮಾತನಾಡಿ ಆಯುರ್ವೇದ ಪದ್ಧತಿಯಿಂದ ಹಿಂದಿನ ದಿನಗಳಿಂದಲೂ ಅತ್ಯುತ್ತಮವಾದ  ಔಷಧಿ ಸಿಗುತ್ತಿದೆ ಇದು ನಮ್ಮೆಲ್ಲರ ಪುಣ್ಯ ಇಂತಹ ಆಯುರ್ವೇದ ಪದ್ಧತಿಯನ್ನು ಉಪಯೋಗಿಸಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು. ಶ್ರೀಶಾರದಾಶ್ರಮದ ಮಾತಾಜಿ ಚೈತನ್ಯಮಯಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಬಾಪೂಜಿ ಕಾಲೇಜಿನ ಪ್ರಾಂಶುಪಾಲರಾದ ಡಾ: ಬಸವರಾಜಪ್ಪ ಮಾತನಾಡಿ  ಪ್ರತಿ ತಿಂಗಳ ಮೂರನೇ ಶನಿವಾರ ಕಾರ್ಯಕ್ರಮ ನಡೆಸಿಕೊಡಲು ಬಿಇಟಿ ಯುರೋ ಕಿಡ್ಸ್  ಶಾಲೆಯ ಸಂಸ್ಥಾಪಕರು ನಮ್ಮೊಂದಿಗೆ ಕೈಜೋಡಿಸಿರುವುದು  ಶ್ಲಾಘನೀಯ ಎಂದರು ಬಾಪೂಜಿ ಆಯುರ್ವೇದ ಕಾಲೇಜಿನ ಸಿಬ್ಬಂದಿ ಬಿಎಟಿ ಯುರೋಕಿಡ್ಸ್ ನ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.