ಉಚಿತ ವ್ಯಾಕ್ಸಿನೇಷನ್ ಸದ್ಬಳಕೆಗೆ ಕರೆ

ವಿಜಯಪುರ, ಜು. ೧೭:ಸರಕಾರವು ಕೇವಲ ೭೫ ದಿನಗಳ ಮಟ್ಟಿಗೆ ಬೂಸ್ಟರ್ ಡೋಸ್ ವ್ಯಾಕ್ಸಿನೇಷನ್ ಅನ್ನು ೧೮ ವರ್ಷ ಮೇಲ್ಪಟ್ಟ ೨ ನೇ ಡೋಸ್ ಪಡೆದುಕೊಂಡು, ೯೦ ದಿನಗಳಾಗಿರುವ ವ್ಯಕ್ತಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ಯಾಮ್ ಸುಂದರ್ ತಿಳಿಸಿದರು.
ಅವರು ಇಲ್ಲಿನ ಪ್ರಗತಿ ಪ್ರಾಥಮಿಕ ಆಂಗ್ಲ ಪಾಠಶಾಲೆಯಲ್ಲಿ ೧೨ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ೨ ನೇ ಡೋಸ್ ಕೊರೊನಾ ವ್ಯಾಕ್ಸಿನೇಷನ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಇದೀಗ ಬೂಸ್ಟರ್ ಡೋಸ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಡೆದುಕೊಂಡವರಿಗೆ ಸರ್ಟಿಫಿಕೇಟ್ ಸಹ ದೊರೆಯುತ್ತಿದ್ದು, ಈ ಹಿಂದೆ ೬೦ ವರ್ಷ ಮೇಲ್ಪಟ್ಟವರು ಹಾಗೂ ಸಾರ್ವಜನಿಕ ಸೇವೆಯಲ್ಲಿನ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಉಚಿತವಾಗಿ ನೀಡಲಾಗುತ್ತಿದ್ದು, ಇದೀಗ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ೭೫ ದಿನಗಳ ಮಟ್ಟಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಗತಿ ಪ್ರಾಥಮಿಕ ಆಂಗ್ಲ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಎನ್.ಪ್ರಕಾಶ್, ಹಿರಿಯ ಆರೋಗ್ಯ ಸಹಾಯಕಿಯರಾದ ಸರಸಮ್ಮ, ಮಮತ, ಉಷಾದೇವಿ, ಉಪಸ್ಥಿತರಿದ್ದರು.