ಉಚಿತ ವಿದ್ಯುತ್ ಅರ್ಜಿ ಸಲ್ಲಿಕೆಗೆ ನುಕುನೂಗ್ಗಲು


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ.20: ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‍ಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ನಗರದ ಜೆಸ್ಕಾಂ ಕಚೇರಿಗೆ ಜನರು ತಂಡೋಪತಂಡವಾಗಿ ಆಗಮಿಸಿದ್ದು ಸರ್ವರ್ ಕೈಕೊಟ್ಟಿದ್ದರಿಂದ, ಅರ್ಜಿ ಸಲ್ಲಿಕೆಗೆ ತೊಡಕಾಯಿತು.
ನಗರದಲ್ಲಿ ಜೆಸ್ಕಾಂನಿಂದ ಐದು ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನೂ ಕರ್ನಾಟಕ ವನ್ ಸೇವಾಸಿಂಧು ಕೇಂದ್ರಗಳು ಎರಡು ಇವೆ. ಕರ್ನಾಟಕ ವನ್ ಸೇವಾಸಿಂಧು ಕೇಂದ್ರದಲ್ಲಿ ಇನ್ನೂ ವೆಬ್‍ಸೈಟ್ ಓಪನ್ ಆಗಲಿಲ್ಲ. ಜೆಸ್ಕಾಂ ಕಚೇರಿಯಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಕೆಗೂ ಸರ್ವರ್ ಡೌನ್ ತೊಡಕಾಯಿತು. ಹಾಗಾಗಿ ಕೆಲವೇ ಅರ್ಜಿಗಳ ಸಲ್ಲಿಕೆಯಾಗಿವೆ ಎಂದು ಜೆಸ್ಕಾಂ ಮೂಲಗಳು ತಿಳಿಸಿವೆ. ಸಮಯಾವಕಾಶವಿದ್ದರೂ ಜನರ ಆತಂಕ ಮಾತ್ರ ದೂರವಾಗದ ಹಿನ್ನೆಲೆಯಲ್ಲಿ ನುಕುನೂಗ್ಗಲು ಏರ್ಪಟ್ಟಿತ್ತು.