ಉಚಿತ ವಸತಿ ಕಟ್ಟಡ ಸ್ಥಳ ವೀಕ್ಷಿಸಲು ಸಿದ್ಧಲಿಂಗ ಶ್ರೀಗಳ ಆಗಮನ

ಮಾನ್ವಿ,ಜೂ.೦೭-
ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಉಚಿತ ಊಟ ಹಾಗೂ ವಸತಿ ನೀಡುವ ಉದ್ದೇಶವನ್ನು ಹೊಂದಲಾಗಿದ್ದು ಅದರ ಕಟ್ಟಡ ನಿರ್ಮಾಣ ಸ್ಥಳ ವೀಕ್ಷಣೆಗಾಗಿ ಒಳಬಳ್ಳಾರಿಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಜೂನ್ ೧೨ ರಂದು ಆಗಮಿಸಲಿದ್ದಾರೆ ಎಂದು ಸಮಾಜದ ಮುಖಂಡ ಈರಪ್ಪ ಗೌಡ ಚಿಕಲಪರ್ವಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದುಗೋಷ್ಠಿ ಕರೆದು ಮಾತಾನಾಡಿದ ಅವರು ನಮ್ಮ ವೀರಶೈವ ಹಾಗೂ ಲಿಂಗಾಯತ ಸಮುದಾಯದ ೮ ನೇ ತರಗತಿಯಿಂದ ಪದವಿಯ ಅಂತದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿಯ ಜೊತೆಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಸಮುದಾಯದ ಮುಖಂಡರು ನಿರ್ಣಯ ಮಾಡಲಾಗಿದ್ದು ಅದರ ಸ್ಥಳವನ್ನು ಪರಿಶೀಲನೆಗಾಗಿ ನಮ್ಮ ಸಮುದಾಯದ ಗುರುಗಳಾದ ಒಳಬಳ್ಳಾರಿಯ ಶ್ರೀಗಳು ಆಗಮಿಸುತ್ತಿದ್ದು ತಾಲೂಕಿನ ಎಲ್ಲ ನಮ್ಮ ಸಮುದಾಯದ ಮುಖಂಡರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹರಿಹರ ಗೌಡ, ವೀರುಪಾಕ್ಷಿಗೌಡ, ಶ್ರೀಧರಸ್ವಾಮಿ, ವಿರೇಶಸ್ವಾಮಿ, ವೀರನಗೌಡ ಮಾಲಿ ಪಾಟೀಲ ಸೇರಿದಂತೆ ಅನೇಕರು ಇದ್ದರು.