ಉಚಿತ ಲಸಿಕೆಗೆ ಎಸ್‍ಯುಸಿಐ (ಸಿ) ಆಗ್ರಹ

ಕಲಬುರಗಿ ಏ 22: ಸಾರ್ವತ್ರಿಕ ಉಚಿತ ಲಸಿಕೆಗೆ ಎಸ್ ಯು ಸಿ ಐ (ಸಿ) ಜಿಲ್ಲಾ ಕಾರ್ಯದರ್ಶಿ ಎಚ್. ವಿ. ದಿವಾಕರ್ ಆಗ್ರಹಿಸಿದ್ದಾರೆ.
ಇನ್ನು ಮುಂದೆ 45ವರ್ಷಕ್ಕಿಂತ ಕೆಳಗಿನ ದೇಶವಾಸಿಗಳು ಕೋವಿಡ್ ಲಸಿಕೆಯ ದುಬಾರಿ ದರವನ್ನು ಭರಿಸಬೇಕೆಂಬ ಕೇಂದ್ರ ಸರ್ಕಾರದ ಘೋಷಣೆಯು ಅತ್ಯಂತ ಆಘಾತಕಾರಿಯಾಗಿದೆ. 18ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಲಸಿಕೆಗೆ ಅರ್ಹರು ಎಂದು ಸರ್ಕಾರ ಘೋಷಿಸುವ ಜೊತೆಗೆ, ಲಸಿಕೆ ಉತ್ಪಾದನಾ ಸಂಸ್ಥೆ
ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಪ್ರತಿ ಡೋಸಿನ ಬೆಲೆಯನ್ನು ರಾಜ್ಯ ಸರ್ಕಾರಗಳಿಗೆ ರೂ. 400 ಮತ್ತು ಮುಕ್ತ ಮಾರುಕಟ್ಟೆಗೆ ರೂ. 600 ಎಂದು ನಿಗದಿಪಡಿಸಿದೆ.ಪ್ರಧಾನಿಗಳೇ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಮತ್ತು ಅದಕ್ಕೆ ಹಣಕಾಸಿನ ಕೊರತೆಯಿಲ್ಲ ಎಂದು ಭರವಸೆ ನೀಡಿದ್ದರು. ಮಿಲಿಯಾಂತರ ಬಡವರು ಎರಡು ತುತ್ತಿನ ಊಟಕ್ಕೆ ಒದ್ದಾಡುವ ಭಾರತದಂತಹ ದೇಶದಲ್ಲಿ ಇಂತಹ ನೀತಿಯನ್ನು ಹೇಗೆ ಘೋಷಿಸಲು ಸಾಧ್ಯ ? ಪ್ರಧಾನಿಗಳು ತಮ್ಮಕೈತೊಳೆದುಕೊಂಡು ಜನರನ್ನು ಉಳಿಸುವ ಜವಾಬ್ದಾರಿಯನ್ನು ಜನರ ತಲೆಗೇ ಕಟ್ಟಿದ್ದಾರೆ.ಇದು ಅತ್ಯಂತ ಖಂಡನಾರ್ಹ ಎಂದಿದ್ದಾರೆ.