ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರ, ಜೂ.1-ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳರವರು ನಗರಾದ್ಯಂತ ಉಚಿತ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರಂತೆ ವಾರ್ಡ ನಂ-5 ರ ಬಿ.ಎಲ್.ಡಿ.ಇ ರಸ್ತೆಯ ಶ್ರೀನಗರ ಕಾಲನಿ ಪಿ&ಟಿ ಕ್ವಾಟರ್ಸ್ ಹತ್ತಿರ ಶ್ರೀ ಹನುಮಾನಗುಡಿ ಆವರಣ, ವಾರ್ಡ ನಂ-21 ಇಬ್ರಾಹಿಂಪೂರ ಹತ್ತಿರದ ರಾಧಾಕೃಷ್ಣ ನಗರದ ಶ್ರೀ ಮಲ್ಲಿಕಾರ್ಜುನ ಗುಡಿ ಆವರಣದಲ್ಲಿ ಲಸಿಕಾ ಕೇಂದ್ರಗಳಿಗೆ ಬೇಟಿ ನೀಡಿ, ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ಕೋವ್ಯಾಕ್ಸಿನ್ ಮತ್ತು ಕೋವಿಶಿಲ್ಡ ಪ್ರಥಮ ಡೋಸ್ ಲಸಿಕೆ ಹಾಗೂ ಎರಡನೇ ಡೋಸ್ ಲಸಿಕೆ ಹಾಕುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸದರಿ ಲಸಿಕಾ ಸ್ಥಳಕ್ಕೆ ಸುತ್ತಲಿನ ನಾಗರಿಕರನ್ನು ಕರೆ ತರಲು ನಗರ ಶಾಸಕರು ಶ್ರೀ ಸಿದ್ಧೇಶ್ವರ ಸಂಸ್ಥೆಯಡಿಯ ಶಾಲಾ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿ, ನಾಗರಿಕರಿಗೆ ಲಸಿಕಾ ಕಾರ್ಯಕ್ರಮದ ಮಾಹಿತಿ ನೀಡಲು ಆಟೋ ಪ್ರಚಾರದ ವ್ಯವಸ್ಥೆಯನ್ನು ಮಾಡಿದ್ದರು. ಮನೆ ಮನೆಗೆ ಹೋಗಿ ಲಸಿಕಾ ಕೇಂದ್ರದ ಮಾಹಿತಿ ನೀಡಿ, ಲಸಿಕಾ ಕೇಂದ್ರಗಳಿಗೆ ಸಾರ್ವಜನಿಕರನ್ನು ಕರೆ ತರಲು ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳನ್ನು ನೀಡಿದ್ದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಡಾ. ಜಯಶ್ರೀ ಮಸಳಿ, ಡಾ.ಬಾಲಕೃಷ್ಣ, ಶ್ರೀನಿವಾಸ ಬೆಟಗೇರಿ, ಚಂದ್ರು ಚೌಧರಿ, ಬಸವರಾಜ ಬೈಚಬಾಳ, ಪ್ರವೀಣ ಕೂಡಗಿ, ಪ್ರಕಾಶ ಚವ್ಹಾಣ, ರಾಜಶೇಖರ ಭಜಂತ್ರಿ, ಉದಯ ನಾವದಗಿ, ವಿಜಯ ಬೋಸ್ಲೆ, ಮಹೇಶ ಅನಂತಪುರ, ಮಂಜುನಾಥ ಅಸಂಗಿ, ಎನ್.ಜಿ ಕಾವಡಗಿ, ರಾಜು ನಾಡಗೌಡ, ನಾಗರಾಜ ಮುಳವಾಡ ಸೇರಿದಂತೆ ಶ್ರೀ ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.