ಉಚಿತ ಯೋಜನೆಗೆ ನಿರ್ಬಂಧ ಸಮಂಜಸವಲ್ಲ : ಶಾಸಕ ಕೆ ನೇಮಿರಾಜ್ ನಾಯ್ಕ್


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.12 ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಪ್ರಕಾರ ಯೋಜನೆ ಜಾರಿಗೆ ತರಬೇಕು ಎಂದು ಶಾಸಕ ಕೆ ನೇಮಿರಾಜ್ ನಾಯಕ್ ಹೇಳಿದರು.
 ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ಸರ್ಕಾರದ ಯೋಜನೆಗೆ  ಸ್ವಾಗತಾರ್ಹ್ ಆದರೆ    ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಹಿಳೆಯರಿಗೆ ಎಲ್ಲಾ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ದೂರದ ಊರಿಗೆ ಹೋಗುವವರಿಗೆ ಲಗ್ಜುರಿ ಮತ್ತು ಎಸಿ ನಾನ್  ಎಸಿ ಬಸುಗಳಲ್ಲಿಯೂ ಉಚಿತ ಪ್ರಯಾಣಿಸಲು ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಿ ಎಲ್ಲಾ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡುವಂತೆ ಕೇಳಿಕೊಳ್ಳುತ್ತೇನೆ. ಬಸ್ ನಿಲ್ದಾಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಯೋಜನೆಯನ್ನು ರೂಪಿಸಲಾಗುವುದು ಎಂದರು.
 ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಬಿ ಗಂಗಾಧರ್, ನಾಗರಾಜ ಜನ್ನು, ದೀಪಕ್ ಕಠಾರೆ, ಭೋವಿ ವೀರಣ್ಣ, ಜೆಡಿಎಸ್ ತಾ. ಅಧ್ಯಕ್ಷ  ವೈ ಮಲ್ಲಿಕಾರ್ಜುನ, ಮುಖಂಡರಾದ ಚಿತ್ತವಾಡಗಿ ಪ್ರಕಾಶ್, ಭರಮರೆಡ್ಡಿ, ಬದಾಮಿ ಮೃತ್ಯುಂಜಯ ಸಂಚಿ ಶಿವಕುಮಾರ್, ಕಿನ್ನಾಳ್   ಸುಭಾಷ್, ಬಿಜಿ  ಬಡಿಗೇರ್, ಜಿಎಂ ಜಗದೀಶ್, ಬೋವಿ  ಬಸವರಾಜ್ , ಬಡಿಗೇರ್ ಬಸವರಾಜ್, ಎಲ್ಐಸಿ ರುದ್ರೇಶ್, ಕೃಷ್ಣಮೂರ್ತಿ ಸರ್ದಾರ್ ಯಮನೂರ್, ಬ್ಯಾಟಿ ನಾಗರಾಜ್, ಅಧಿಕಾರಿಗಳಾದ ವಿಶ್ವೇಶ್ವರಯ್ಯ ಮಹಾಂತೇಶ್ ಸಿಪಿಐ ಮಂಜಣ್ಣ, ಪಿ ಎಸ್ ಐ  ಸರಳಾ, ಡಿಪೋ ವ್ಯವಸ್ಥಾಪಕ ಗುರುಬಸಮ್ಮ ಹಾಗೂ ಸಿಬ್ಬಂದಿ ವರ್ಗ ಇದ್ದರು.

One attachment • Scanned by Gmail

ReplyForward