ಉಚಿತ ಮಾಸ್ಕ ವಿತರಣೆಗೆ ಡಾ.ಜಾಧವ ಜಾಲನೆ

ಚಿಂಚೋಳಿ,ಜೂ.1- ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ ಜಾಧವ ಅವರು, ಸ್ವಂತ ವೆಚ್ಚದಲ್ಲಿ ಚಂದಾಪುರ ಪಟ್ಟಣದ ಸಾರ್ವಜನಿಕರಿಗೆ ಉಚಿತ ಮಾಸ್ಕ್ ಗಳ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಡಾ. ಅವಿನಾಶ ಜಾಧವ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಬುರ್ಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ ದತ್ತರಗಿ ಅವರು, ಕೋವಿಡ್ ನಿಯಮ ಪಾಲಿಸುವ ಮೂಲಕ ಕೋರೊನಾ ಸೋಂಕು ಹರಡುವುದನ್ನು ತಪ್ಪಿಸಲು ಸಾಧ್ಯವಿದೆ ಎಂದರು.
ಬಿಜೆಪಿ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ. ಅಶೋಕ ಚವ್ಹಾಣ. ಸತೀಶರೆಡ್ಡಿ. ಪ್ರದೀಪ ಮೇತ್ರಿ. ಗಿರಿರಾಜ ನಾಟಿಕರ. ಶರಣು ಪಾಟೀಲ ದೇಗಲಮಡಿ. ಮತಿನ ಸೌದಾಗರ್. ಅಲ್ಲಂಪ್ರಭು ಹುಲಿ ಪಾಟೀಲ. ಉಮೇಶ್ ಬೆಳಕೇರಿ. ಕೆ.ಎಂ. ಬಾರಿ. ಅಭಿಷೇಕ ಮಲಕನೋರ. ಪವನಕುಮಾರ ಗೋಪನಪಳ್ಳಿ. ಮಲ್ಲು ಕೋಡಂಬಲ ಚಿಮ್ಮನಚೋಡ. ವಿಠ್ಠಲ್ ಕುಸಾಲೆ. ಅಂಬಾದಾಸ್ ಭೋವಿ. ಗಾಂಧಿ ಪಾಟೀಲ ಸಾಸರ್ಗಾವ್. ವಿವೇಕ್ ಪಾಟೀಲ ದೇಗಲಮಡಿ. ಮತ್ತು ಅನೇಕ ಬಿಜೆಪಿ ಪಕ್ಷದವರು ಉಪಸ್ಥಿತರಿದ್ದರು.