ಉಚಿತ ಮಧುಮೇಹ ತಪಾಸಣೆ

ಕಲಬುರಗಿ,ನ.20-ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಮತ್ತು ವಿಶ್ವ ಚೇತನ ಆಯುರ್ವೇದಿಕ ಚಿಕಿತ್ಸಾಲಯದ ಸಂಯುಕ್ತಾಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಉಚಿತ ಮಧುಮೇಹ ತಪಾಸಣೆ ಮತ್ತು ಜಾಗೃತಿ ಶಿಬಿರವನ್ನು ಇತ್ತೀಚರಗೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಖ್ಯಾತ ಮಧುಮೇಹ ರೋಗ ತಜ್ಷ ಡಾ.ಮಂಜುನಾಥ ಅಣಕಲ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಧುಮೇಹ ರೋಗ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚಿಕಿತ್ಸೆಯ ಬಗ್ಗೆ ವಿವರಿಸಿದರು.
ಖ್ಯಾತ ಆಯುರ್ವೇದ ವೈದ್ಯ ಡಾ.ಸತೀಶ ಎಂ.ಪಾಟೀಲ್ ಅವರು ಆಯುರ್ವೇದ ಪದ್ಧತಿಯಿಂದ ಮಧುಮೇಹ ರೋಗ ಗುಣಪಡಿಸುವ ಮಗತ್ವವನ್ನು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಉಪಸಭಾಪತಿ ಅರುಣಕುಮಾರ ಲೋಯಾ, ಖಜಾಂಚಿ ಭಾಗ್ಯಲಕ್ಷ್ಮೀ ಎಂ, ಆಡಳಿತ ಮಂಡಳಿ ಸದಸ್ಯರಾದ ಧನರಾಜ ಭಾಸಗಿ, ವಿಶ್ವನಾಥ ಕೋರವಾರ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಸ್ವಾಗತಿಸಿದರು. 100ಕ್ಕಿಂತ ಹೆಚ್ಚು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು. ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು. ಜಿ.ಎಸ್.ಪದ್ಮಾಜಿ ವಂದಿಸಿದರು.