ಉಚಿತ ಮಧುಮೇಹ ತಪಾಸಣೆ ಶಿಬಿರಕ್ಕೆ ಚಾಲನೆ

ಮೈಸೂರು: ನ.14:- ಮೈಸೂರಿನಲ್ಲಿ ಭಾನುವಾರ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಡೆದ ಜನಜಾಗೃತಿ ಹಾಗೂ ಉಚಿತ ಮಧುಮೇಹ ತಪಾಸಣೆ ಶಿಬಿರ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಚಾಲನೆ ನೀಡಿದರು.
ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಕುಕ್ಕರಹಳ್ಳಿ ಕೆರೆ (ರೈಲ್ವೆ ಗೇಟ್) ಸಮೀಪ ಕೃಷ್ಣರಾಜ ಯುವ ಬಳಗ ಹಾಗೂ ಸುಯೋಗ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಮಧುಮೇಹದ ಜನಜಾಗೃತಿ ಹಾಗೂ ಉಚಿತ ಮಧುಮೇಹ ತಪಾಸಣೆ ಶಿಬಿರ ನಡೆಯಿತು.
ಜಾಥಾಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಬಹಳಷ್ಟು ಜನರು ಕೆಲಸದ ಒತ್ತಡದಿಂದ ಮಧುಮೇಹದಿಂದ ಬಳಲುವಂತಾಗಿದೆ. ಪ್ರತಿನಿತ್ಯ ಬಿರುಸಿನ ನಡಿಗೆ ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು' ಎಂದರು. ಸುಯೋಗ್ ಆಸ್ಪತ್ರೆ ಮುಖ್ಯಸ್ಥರಾದ ಡಾಕ್ಟರ್ ಎಸ್.ಪಿ ಯೋಗಣ್ಣ ಮಾತನಾಡಿ, ನವೆಂಬರ್ ಹಾಗೂ ಡಿಸೆಂಬರ್ ಮಾಸ ಪೂರ್ಣವಾಗಿ ಮೈಸೂರಿನ ಎಲ್ಲಾ ಉದ್ಯಾನವನದಲ್ಲೂ ವಾಯು ವಿಹಾರಿಗಳಿಗೆ ಉಚಿತ ಮಧುಮೇಹ ತಪಾಸಣೆ ಆಯೋಜಿಸಲಾಗುವುದುಮಿತ ಆಹಾರ ಸೇವನೆ, ನಿತ್ಯ ನಿಯಮಿತ ವ್ಯಾಯಾಮ ಮಾಡುವುದರಿಂದ ಮಧುಮೇಹ ಬರದಂತೆ ತಡೆಯಬಹುದು.
ದೇಶದಲ್ಲಿ 8 ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದಾರೆ.
ಇನ್ನೂ 8 ಕೋಟಿ ಜನ ಮಧುಮೇಹದ ಸನಿಹದಲ್ಲಿದ್ದಾರೆ. ಮಧುಮೇಹದಿಂದ ಬಳಲುವುದರಿಂದ ಕುಟುಂಬ ಮಾತ್ರವಲ್ಲದೇ ದೇಶದ ಆರ್ಥಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದರು.
`ಮಧುಮೇಹದಿಂದ ಹಲವು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಧುಮೇಹ ತಡೆಗಟ್ಟುವ ಕುರಿತು ಸರ್ಕಾರ, ರಾಷ್ಟ್ರೀಯ ಕಾರ್ಯಕ್ರಮವನ್ನು ರೂಪಿಸಬೇಕು’ ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಕೆ ಸೋಮಶೇಖರ್, ಸುಯೋಗ್ ಆಸ್ಪತ್ರೆ ಮುಖ್ಯಸ್ಥರು ಡಾ.ಎಸ್ ಪಿ ಯೋಗಣ್ಣ, ಜೆಎಸ್ ಎಸ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಅಕ್ಷಯ್, ಡಾ.ರಂಗನಾಥ್, ಮಾಜಿ ನಗರ ಪಾಲಿಕಾ ಸದಸ್ಯರಾದ ಸುನೀಲ್ ಕುಮಾರ್, ಜೋಗಿ ಮಹೇಶ್, ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್, ಕೃಷ್ಣರಾಜ ಯುವಬಳಗದ ಅಧ್ಯಕ್ಷರಾದ ನವೀನ್ ಕೆಂಪಿ, ವಿಶ್ವ, ಮಹೇಂದ್ರ ಎಂ ಶೈವ, ಮಹದೇವಪ್ರಸಾದ್, ಪ್ರಶಾಂತ್ ಹಾಗೂ ಇನ್ನಿತರರು ಹಾಜರಿದ್ದರು.