ಉಚಿತ ಬೇಸಿಗೆ ತರಬೇತಿ ಶಿಬಿರ

ಜೇವರಗಿ,ಏ 12: ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಅಡಿಯ ಜಗದ್ಗುರು ತೋಂಟದಾರ್ಯ ಇಂಗ್ಲಿಷ್ ಮೀಡಿಯಂ ಪ್ರಾಥಮಿಕ ಶಾಲೆಯಲ್ಲಿ1ನೇ ತರಗತಿಯಿಂದ 8ನೇ ತರಗತಿ ಮಕ್ಕಳಿಗಾಗಿ ಉಚಿತ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಸ್ಥಾನಿಕ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ ಹೇಳಿದ್ದಾರೆ. ತರಬೇತಿಯಲ್ಲಿ ಪ್ರತಿ ಮಗುವಿನ ಬಗ್ಗೆ ವೈಯಕ್ತಿಕ ಕಾಳಜಿ, ಅನುಭವಿ ಶಿಕ್ಷಕ ವೃಂದ, ತಂತ್ರಜ್ಞಾನ ಮತ್ತು ಚಟುವಟಿಕೆ ಆಧಾರಿತ ಕಲಿಕೆ ವಿಧಾನ, ಆಧುನಿಕ ಪಾಠೋಪಕರಣ ಮತ್ತು ಪೀಠೋಪಕರಣ, ಅರ್ಥ ಮಾಡಿಕೊಂಡು ಕಲಿಕೆಯಲ್ಲಿ ವಿಶೇಷ ಕಾಳಜಿ ವಹಿಸುವುದು ಇವೆಲ್ಲ ಜೆ ಟಿ ವಿ ಪಿ ಶಿಕ್ಷಣ ಸಂಸ್ಥೆಯ ಬೇಸಿಗೆ ತರಬೇತಿಯವಿಶೇಷತೆಗಳು ಎಂದುತಿಳಿಸಿದರು . ಸಂಸ್ಥೆಯ ಸ್ಥಾನಿಕ ಕಾರ್ಯದರ್ಶಿ ಪೆÇ್ರ.ವಿಜಯಕುಮಾರ್ ಎಸ್ ಮಾಲಗಿತ್ತಿ ಮಾತನಾಡಿ ಏಪ್ರಿಲ್ 15ರಿಂದ ತರಬೇತಿ ಪ್ರಾರಂಭ ಮಾಡಲಾಗುತ್ತಿದೆ. ತರಬೇತಿಯಲ್ಲಿ ವಿಶೇಷವಾದ ಕಲಿಕಾ ಚಟುವಟಿಕೆಗಳಾದ ಗಣಿತ, ವಿಜ್ಞಾನ ಪ್ರಯೋಗಗಳು, ಯೋಜನಾ ಕಾರ್ಯಗಳು, ಇಂಗ್ಲಿಷ್ ಗ್ರಾಮರ್, ಕನ್ನಡ ಗ್ರಾಮರ್, ರೀಡಿಂಗ್ ಸ್ಕಿಲ್ಸ್ , ರೈಟಿಂಗ್ ಸ್ಕಿಲ್ಸ್ ,ಅಬಾಕಸ್ ,ಮಾನಸಿಕ ಸಾಮಥ್ರ್ಯ, ಚಿತ್ರಕಲೆ ಮತ್ತು ಪೇಂಟಿಂಗ್, ಕಲೆ ಮತ್ತು ಕರಕುಶಲತೆ, ನೃತ್ಯ ಮತ್ತು ಗಾಯನ, ವ್ಯಕ್ತಿತ್ವ ವಿಕಾಸನಕ್ಕಾಗಿ ಕಥೆ, ಸಾರ್ವಜನಿಕ ಭಾಷಣ ಸ್ಪರ್ಧೆ ,ಮೆದುಳು ಚುರುಕುಗೊಳಿಸುವ ಆಟಗಳು, ಯೋಗ, ಆಟಗಳು, ಧ್ಯಾನ, ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9972609213, 6366611822, ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಿದರು. ಈ ಸಂದರ್ಭದಲ್ಲಿ ಮುಖ್ಯ ಗುರು ಶಿವಸಾಯಿ ಮಮದಾಪುರ್,ವಿಶ್ವಾಸ್ ಶಿಂದೆ, ಡಾ. ದೇವೇಂದ್ರ ವಿಶ್ವಕರ್ಮ ಹಾಜರಿದ್ದರು.