ಉಚಿತ ಬೆನ್ನುಹುರಿ ಆರೋಗ್ಯ ತಪಾಸಣೆ ಶಿಬಿರ

(ಸಂಜೆವಾಣಿ ವಾರ್ತೆ)
ಇಂಡಿ :ಮಾ.28:ಪಟ್ಟಣದ ದೇಸಾಯಿ ಫೌಂಡೇಶನ್ ಹಾಗೂ ದೇಸಾಯಿ ಆಸ್ಪತ್ರೆ ಹಾಗೂ ದಿ ಅಸೋಷಿಯೇಷನ್ ಆಪ್ ಪೀಪಲ್ ವಿಥ್ ಡಿಸೆಬಿಲಿಟಿ ವಿಜಯಪುರ ಇವರುಗಳ ಸಹಯೋಗದಲ್ಲಿ ಗುರುವಾರ ಬೆನ್ನುಹುರಿ ಅಫಘಾತಕ್ಕೋಳಗಾದ ವ್ಯಕ್ತಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು 3 ದಿನಗಳ ವ್ಯಾಯಾಮ ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಜಯನಗರದ ದೇಸಾಯಿ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಅಸೋಷಿಯೇಷನ್ ಸಂಯೋಜಕ ಎನ್. ಪಾಲಸ್ವಾಮಿ ಮಾತನಾಡಿ,ಈ ಸಂಸ್ಥೆಯು ಸುಮಾರು 62ವರ್ಷಗಳಿಂದ ಇಡೀ ದೇಶದಾದ್ಯಂತ ಬೆನ್ನುಹುರಿ ಅಫಘಾತಕ್ಕೋಳಗಾದ ವ್ಯಕ್ತಿಗಳನ್ನು ಹುಡುಕಿ ಅವರ ಮನೆ ಮನೆಗೆ ತೆರಳಿ ಅವರಿಗೆ ಅಗತ್ಯವಿರುವ ಎಲ್ಲಾ ರೀತೀಯ ಸಹಾಯ ಸೌಲಭ್ಯ ಸಲಕರಣೆಗಳನ್ನು ಒದಗಿಸುತ್ತಾ ಸೇವೆ ಮಾಡುತ್ತಿದೆ.ಇಂಡಿ ತಾಲೂಕಿನಲ್ಲಿರುವ ಈ ರೀತೀಯ ಸುಮಾರು 45 ಜನರನ್ನು ಗುರುತಿಸಿ ಅವರಿಗೆ ಸೇವೆ ಹಾಗೂ ಸಲಕರಣೆಗಳನ್ನು ಒದಗಿಸುತ್ತಿದ್ದಾರೆ.ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಈ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಫಿಜಿಯೊಥೆರೆಪಿ ಮಾಡಿಸಬೇಕಾಗುತ್ತದೆ. ಈ ವ್ಯಕ್ತಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆಗಳಾದ ರಕ್ತ ಪರೀಕ್ಷೆ, ಎಕ್ಸ್-ರೇ, ಸ್ಕ್ಯಾನಿಂಗ್, ಹಾಗೂ ಮೂರು ದಿನಗಳ ಕಾಲ ಅವರಿಗೆ ವಸತಿಯ ಸೌಲಭ್ಯವನ್ನು ದೇಸಾಯಿ ಫೌಂಢೇಶನ್ ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ ಸಂಸ್ಥೆಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು.
ಮುಖ್ಯ ಅತಿಥಿಯಾಗಿ ಮಾತನಾಡಿದ ದೇಸಾಯಿ ಫೌಂಢೇಶನ್‍ನ ಕಾರ್ಯದರ್ಶಿ ಡಾ.ಕಮಲಾಕರ ದೇಸಾಯಿ,ದೇಶದಾದ್ಯಂತ ಸುಮಾರು 5 ಲಕ್ಷ ಜನರಿಗೆ ಇಲ್ಲಿಯವರೆಗೆ ಇಂತಹ ಸೌಲಭ್ಯವನ್ನು ಒದಗಿಸಿದ್ದಾರೆ. ಈ ಸಂಸ್ಥೆಯವರಿಗೆ ಯಾವಾಗ ಬೇಕಾದರೂ ಅವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಸಿದ್ದವೆಂದು ತಿಳಿಸಿದರು.ಡಾ.ಶಿವಕುಮಾರ ಕೊಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಬುದ್ದುಗೌಡ ಪಾಟೀಲ, ದೇಸಾಯಿ ಇಂಟರ್‍ನ್ಯಾಷನಲ್ ಸ್ಕೂಲ್‍ನ ಪ್ರಿನ್ಸಿಪಾಲ ಪ್ರಥೀಪ್ ಮಣ ಮತ್ತೀತರರು ಭಾಗವಹಿಸಿದ್ದರು. ಶಿಕ್ಷಕ ಸಂಗಮೇಶ ಕಂಬಾರ ಸ್ವಾಗತಿಸಿ,ನಿರೂಪಿಸಿದರು.ಈರಮ್ಮ ವಂದಿಸಿದರು.