ಉಚಿತ ಬೂಸ್ಟರ್ ಡೋಸ್ ಪಡೆದು ಕೋವಿಡ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ :ಯತ್ನಾಳ

ವಿಜಯಪುರ ಜು.18- ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಮುನ್ನೆಚ್ಚರಿಕಾ ಡೊಸ್ ನೀಡಲಾಗುತ್ತಿದ್ದು ಲಸಿಕೆ ಪಡೆಯುವ ಮೂಲಕ ಕೋವಿಡ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ವಿಜಯಪುರ ನಗರದ ಶಾಸಕರುಗಳಾದ ಬಸನಗೌಡ ಆರ್. ಪಾಟೀಲ (ಯತ್ನಾಳ) ಮನವಿ ಮಾಡಿದರು.
ಅವರು ಕೃಷ್ಣಮಠ ಬಾಗಲಕೋಟ ರಸ್ತೆ ವಿಜಯಪುರದಲ್ಲಿ ಕೋವಿಡ್ ಲಸಿಕಾ ಅಮೃತ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿ 2ನೇ ಡೋಸ್ ಪಡೆದ 6 ತಿಂಗಳ ಅಥವಾ 26 ವಾರ ಪೂರ್ಣಗೊಂಡ ನಂತರ 18 ವರ್ಷ ಮೇಲ್ಪಟ್ಟ ಎಲ್ಲರೂ (ಬೂಸ್ಟರ್ ಡೋಸ್) ಮುನ್ನೆಚ್ಚರಿಕೆ ಡೋಸ್ ಪಡೆಯಬಹುದಾಗಿದ್ದು ಸಪ್ಟೆಂಬರ 30 ರವರೆಗೆ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮುಂದಿನ 75 ದಿನಗಳಲ್ಲಿ ವಿಜಯಪುರ ಜಿಲ್ಲಾದ್ಯಂತ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ವಿತರಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 12ವರ್ಷ ಮೇಲ್ಪಟ್ಟವರಿಗೆ 1ನೇ & 2ನೇ ಡೋಸ್ ಶೇ. 100ಕ್ಕಿಂತ ಹೆಚ್ಚು ಲಸಿಕೆಯನ್ನು ನೀಡಲಾಗಿದೆ. ಮತ್ತು 15 ವರ್ಷ ಮೇಲ್ಪಟ್ಟವರಿಗೆ ಶೆ. 95% ಕ್ಕಿಂತ ಹೆಚ್ಚು ಮಾಡಿದ್ದಾರೆ. 18 ವರ್ಷದವರಿಗೆ ಶೇ. 116% ಹೆಚ್ಚು ಸಾಧನೆ ಮಾಡಲಾಗಿದೆ. ವಿಜಯಪುರ ಜಿಲ್ಲೆ ರಾಜ್ಯದಲ್ಲಿ 2ನೇ ಸ್ಥಾನದಲ್ಲಿ ಇದೆ ಇದು 1ನೇ ಸ್ಥಾನಕ್ಕೆ ಬರಬೇಕಾದರೆ ಎಲ್ಲರೂ ಉಚಿತವಾಗಿ ಲಸಿಕೆ ಪಡೆಯಬೇಕು ಎಂದು ಹೇಳಿದರು
ಪ್ರಸ್ತಾವಿಕವಾಗಿ ಡಾ. ಕೆ.ಡಿ. ಗುಂಡಬಾವಡಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರುಗಳಾದ ಶ್ರೀಹರಿ ಗೋಳಸಂಗಿ, ಪರಶುರಾಮ ರಜಪೂತ, ಡಾ. ನರಸಾಪುರ, ಕೃಷ್ಣ ಮಠದ ಅಧ್ಯಕ್ಷರು ಮತ್ತು ಇನ್ನಿತರ ಮುಖಂಡರು ಭಾಗವಹಿಸಿದ್ದರು. ಮತ್ತು ಎಲ್ಲಾ ಕಾರ್ಯಕ್ರಮ ಅನುಷ್ಟಾನದ ಅಧಿಕರಿಗಲು ನವಭಾಗ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಿದರು. ಕೊನೆಯದಾಗಿ ಉಪಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿಗಳಾದ ಸುರೇಶ ಹೊಸಮನಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.