ಉಚಿತ ಬೂಸ್ಟರ್ ಡೋಸ್ ಅಭಿಯಾನ

ಹುಬ್ಬಳ್ಳಿ,ಜು 23 : ನಗರದ ಗೋಕುಲ ರಸ್ತೆಯ ಜೈಂಟ್ಸ್ ಗ್ರುಪ್ ಆಫ್ ರಾಜಧಾನಿ ಕಾಲೋನಿ ಇವರು ಗ್ರೀನ್ ಗಾರ್ಡನ್ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಉಚಿತ ಕೋವಿಡ್-19 ಮುನ್ನೆಚ್ಚರಿಕೆ ಬೂಸ್ಟರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜೈಂಟ್ಸ್ ವೇಲ್ ಫೇರ್ ಫೌಂಡೇಶನ ಘಟಕ-6ರ ರಾಜ್ಯಾಧ್ಯಕ್ಷೆಯಾದ ತಾರಾದೇವಿ ವಾಲಿ ಬೂಸ್ಟರ್ ಡೋಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜೈಂಟ್ಸ್ ಗ್ರುಪ ಆಫ್ ರಾಜಧಾನಿ ಕಾಲೋನಿಯ ಜನಪರ ಸೇವೆಯ ಮೆಚ್ಚುಗೆ ವ್ಯಕ್ತಪಡಿಸಿದರು. 54ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯೆ ಸರಸ್ವತಿ ವಿ. ದೊಂಗಡಿಯವರು ಸಹ ರಾಜದಾನಿ ಕಾಲನಿಯ ಎಲ್ಲ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಅಭಿಯಾನದಲ್ಲಿ ಸುಮಾರು 310 ಜನರು ಉಚಿತವಾಗಿ ಮುನ್ನೆಚ್ಚರಿಕೆ ಬೂಸ್ಟರ್ ಡೋಸನ್ನು ಹಾಕಿಸಿಕೊಂಡರು. ರಾಜಧಾನಿ ಗ್ರುಪ್ ಅಧ್ಯಕ್ಷರಾದ ಸೋಮೇಶ್ವರ ಶೇಟ, ಜೈಂಟ್ಸನ ರಾಜ್ಯ ಘಟಕದ ಕಾರ್ಯದರ್ಶಿ ಎಸ್. ಬಿ. ಹೊಸೂರ, ಕೇಂದ್ರ ಸಮಿತಿಯ ಸದಸ್ಯರಾದ ಜಿ. ಎಸ್. ನಾಯಕ, ಚನ್ನಬಸಪ್ಪ ಧಾರವಾಡಶೆಟ್ಟರ, ರಾಜ್ಯದ ಉಪಾಧ್ಯಕ್ಷರಾದ ಪಾಂಡುರಂಗ ತಲಬೈಲಕರ, ರಾಕೇಶ ಚವ್ಹಾಣ, ಗ್ರೀನ್ ಗಾರ್ಡನ ಅಧ್ಯಕ್ಷರಾದ ನಾಗರಾಜ ಹೆಗಡೆ, ಪ್ರಮೋದ ಪೈ, ಮಗಜಿಕೊಂಡಿ ಮುಂತಾದವರು ಉಪಸ್ಥಿತರಿದ್ದರು.