ಉಚಿತ ಬಸ್ ಪಾಸ್ ಗೆ ಆಗ್ರಹಿಸಿ ಎಐಡಿಎಸ್‌ಓ ಪ್ರತಿಭಟನೆ

ರಾಯಚೂರು,ನ೧೧-ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಿ ಹಾಗೂ ನೂತನ ಶಿಕ್ಷಣ ನೀತಿಯನ್ನು ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ನೂತ ನ ಶಿಕ್ಷಣ ನೀತಿಯನ್ನು ಅನುಸ್ಥಾನಕ್ಕೆ ತರಲು ನಿರ್ಧರಿಸಿದ್ದಾರೆ. ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ವ್ಯಾಪಕವಾಗಿ ವಿರೋಧವನ್ನು ವ್ಯಕ್ತಪಡಿಸಿ ದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆ ಗಳು ಹಾಗೂ ಸೇರ್ಪಡೆಗಳ ಕುರಿತು ಹಲವಾರ ಅಂಶಗಳು ಸೇರಿಸಲು ಚರ್ಚೆ ಮತ್ತು ಭಿನ್ನಾಭಿಪ್ರಾ ಯಗಳು ಸಂಗ್ರಹಲಾಗುತ್ತಿದೆ ಎಂದರು.
ಸರ್ಕಾರ ತರಾತುರಿಯಲ್ಲಿ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ಭಾಗವಾಗಿ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಕ್ಕೆ ತಂದಿದೆ. ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಇದ ರಿಂದ ಅಂಧಕಾರವಾಗಿದೆ. ಈಗಾಗಲೇ ಪ್ರಥ ಮ ಡಿಗ್ರಿ ತರಗತಿಗಳು ಆರಂಭವಾಗಿದ್ದು, ನೂತನ ಶಿಕ್ಷಣ ನೀತಿ ಆಧಾರಿತ ಪಠ್ಯಕ್ರಮ ತಯಾರಾಗಿಲ್ಲ, ಈ ಬಗ್ಗೆ ಶಿಕ್ಷಕರಿ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಲಭ್ಯವಿಲ್ಲ, ನೂತನ ಶಿಕ್ಷಣ ನೀತಿಯಡಿ ಪಾಠ ಮಾಡುವ ಶಿಕ್ಷಕರಿಗೆ ತರಬೇತಿ ನೀಡಿಲ್ಲ ಎಂದು ತಿಳಿಸಿದರು.
ನೂತನ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾದರೆ, ಇನ್ನೊಂದೆಡೆ ಶಿಕ್ಷಣದ ಗುಣಮಟ್ಟಕ್ಕೆ ಮಾರಕವಾಗುತ್ತದೆ.ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ. ನೇರವಾಗಿ ಶಿಕ್ಷಣದ ಖಾಸ ಗೀಕರಣ ಹಾಗೂ ಕೋಮುವಾದಿಕರಣಕ್ಕೆ ಕಾರಣವಾಗುತ್ತದೆ. ಕುರಿತು ಅಭಿಪ್ರಾಯಗಳು ಬಂದಿವೆ, ಈ ಹಿನ್ನೆಲೆಯಲ್ಲಿ ಸರ್ಕಾರ ಶಿಕ್ಷಕರ, ವಿದ್ಯಾರ್ಥಿಗಳು ಮತ್ತು ಸಂಘಟನೆಗಳ ಎಲ್ಲ ಅಭಿಪ್ರಾಯಗಳನ್ನು ಪ್ರಜಾತಾಂತ್ರಿಕವಾಗಿ ಕೂಲಂಕುಷವಾಗಿ ಪರಿಗಣನೆಗೆ ತೆಗೆದುಕೊಂಡು ನೂತನ ಶೈಕ್ಷಣಿಕ ನೀತಿಯ ಬಗ್ಗೆ ಚರ್ಚೆ ಮಾಡ ಬೇಕು ಎಂದು ಹೇಳಿದರು.
ನಾಲ್ಕು ವರ್ಷದ ಪದವಿ ಕೋರ್ಸ್ ನ್ನು ಸರ್ಕಾರ ವಾಪಸ್ ಪಡೆಯಬೇಕು, ಈ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಅನ್ನು ಉಚಿತವಾಗಿ ನೀಡಬೇಕು, ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್ ಸಂದರ್ಭಗಳಲ್ಲಿ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಅತ್ಯಂತ ಸಿಲುಕಿವೆ. ಸಂಪೂರ್ಣ ವೆಚ್ಚ ಭರಿಸಬೇಕು,
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಮಹೇಶ ಚಿಕಲಪರ್ವಿ, ಕಾರ್ಯದರ್ಶಿ ಪೀರ್ ಸಾಬ್, ಕಾರ್ತಿಕ, ಬಸವರಾಜ, ಶ್ರೀಕಾಂತ, ವಿಶ್ವಾಸ್, ಹೇಮಂತ, ಅಮೋಘ, ಬಸವರಾಜ ಸೇರಿದಂತೆ ಅನೇಕರು ಇದ್ದರು.