ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

ಬೀದರ್:ಫೆ.10: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ರೋಶ್ನಿ ಎಜುಕೇಷನ್ ಸೊಸೈಟಿ, ಜಿಲ್ಲಾ ವಕೀಲರ ಸಂಘ ಹಾಗೂ ಕಂಪಾನಿಯೋ ಸಂಸ್ಥೆ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಆಯೋಜಕರಾದ ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ ತಿಳಿಸಿದರು.
ಆರೋಗ್ಯ ಸುಧಾರಣೆಗೆ ಫೂಟ್ ಪಲ್ಸ್ ಥೆರಪಿ ಅತ್ಯುತ್ತಮ ವಿಧಾನವಾಗಿದೆ. ಕಾಲಿಗೆ ಅರ್ಧ ಗಂಟೆ ಹಾಗೂ ಕೈಗೆ 10 ನಿಮಿಷದ ಥೆರಪಿ ತೆಗೆದುಕೊಳ್ಳುವುದು ಬರಿಗಾಲಲ್ಲಿ 5 ಕಿ.ಮೀ. ನಡಿಗೆಗೆ ಸಮಾನ ಎಂದು ಹೇಳಿದರು.
ಫೂಟ್ ಪಲ್ಸ್ ಥೆರಪಿಯಿಂದ ದೇಹದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಜೀರ್ಣ ಕ್ರಿಯೆ, ನಿದ್ರೆ ಚೆನ್ನಾಗಿ ಆಗುತ್ತದೆ ಎಂದು ತಿಳಿಸಿದರು.
ವಕೀಲರು ಶಿಬಿರದ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹೇಶ ಪಾಟೀಲ, ಕಾರ್ಯದರ್ಶಿ ಪರಮೇಶ್ವರ ಬಂಬುಳಗೆ, ರೋಶ್ನಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ವಿಕ್ರಮ ಮುದಾಳೆ ಮೊದಲಾದವರು ಇದ್ದರು.