ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ರಕ್ತದಾನ ಶಿಬಿರ

ಬಾದಾಮಿ,ಜೂ24: ವನಶ್ರೀ ಪೆಟ್ರೋಲಿಯಂ, ಸೋನಾಲಿಕಾ ಟ್ರ್ಯಾಕ್ಟರ್ ಶೋರೂಂ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮತ್ತು ಎಂ.ಎಂ.ಜೋಶಿ ಆಸ್ಪತ್ರೆ ಬಾಗಲಕೋಟೆ ಸಹಯೋಗದಲ್ಲಿ ಜೂ.25 ಭಾನುವಾರ ಬನಶಂಕರಿಯ ಸೋನಾಲಿಕಾ ಟ್ರ್ಯಾಕ್ಟರ್ ಶೋರೂಂ ನಲ್ಲಿ ಬೆ.8-ರಿಂದ ಮಧ್ಯಾಹ್ನ 2-30ವರೆಗೆ ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರ ಜರುಗಲಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಲಿಕ ರಮೇಶ ಹಾದಿಮನಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದು 2015ರಿಂದ ಪ್ರತಿವರ್ಷ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿಸುತ್ತ ಬರಲಾಗಿದ್ದು, ಕೋವಿಡ್ ಸಂದರ್ಭ ಹೊರತುಪಡಿಸಿ ಇಲ್ಲಿಯವರೆಗೆ 564 ನೇತ್ರ ಸಮಸ್ಯೆ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದರು.
ಎಂ.ಎಂ.ಜೋಶಿ ಆಸ್ಪತ್ರೆಯ ಸಹಯೋಗದಲ್ಲಿ ನಡೆಯುವ ಉಚಿತ ಶಿಬಿರದ ಪ್ರಯೋಜನ ಪಡೆಯಬಹುದು. ನೋಂದಣಿ ಗೆ ಮತ್ತು ಹೆಚ್ಚಿನ ಮಾಹಿತಿಗೆ 8861338710, 9986787452, 7406014842, 9945399618ಗೆ ಸಂಪರ್ಕ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಹಿರೇಹಾಳ, ಇಷ್ಟಲಿಂಗ ನರೆಗಲ್, ಸೋಮಣ್ಣ ಬಿಂಗೇರಿ, ರಮೇಶ ನಾಲತವಾಡ, ಶಿವುಕುಮಾರ ಆಶಿ ಸೇರಿದಂತೆ ಇತರರಿದ್ದರು.