ಬಾದಾಮಿ,ಜೂ27: ಜೀವನ ಪೂರ್ತಿ ನಮಗಾಗಿ ಬದುಕು ಬದುಕಲ್ಲ. ಇನ್ನೊಬ್ಬರಿಗಾಗಿ ಬದುಕಿಗೆ ದೇವರು ಮೆಚ್ಚುತ್ತಾನೆ. ರಮೇಶ ಹಾದಿಮನಿ ಅವರ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ರಕ್ತದಾನ ಶಿಬಿರದ ಈ ಸಾಮಾಜಿಕ ಕಾರ್ಯ ನಿಜಕ್ಕೂ ಮೆಚ್ಚಬೇಕು ಎಂದು ಒಪ್ಪತ್ತೇಶ್ವರಶ್ರೀ ಹೇಳಿದರು.
ತಾಲೂಕಿನ ಬನಶಂಕರಿ ಹತ್ತಿರದ ವನಶ್ರೀ ಪೆಟ್ರೋಲ್ ಬಂಕ್, ಸೋನಾಲಿಕಾ ಟ್ರ್ಯಾಕ್ಟರ್ ಶೋರೂಂ, ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು. ಒಟ್ಟು 450 ಜನರು ತಪಾಸಣೆಗೆ ಒಳಪಟ್ಟಿದ್ದರು. ಅದರಲ್ಲಿ 69 ಜನರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. ಡಾ.ಎಲ್.ಎಂ.ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ.ಡಿ.ಯಲಿಗಾರ, ಸಿ.ಎಸ್.ಯಲಿಗಾರ, ರಮೇಶ ಹಾದಿಮನಿ, ಚಂದನಗೌಡ ಗದ್ದಿಗೌಡರ, ಸೋನಾಲಿಕಾ ಝಡ್ ಎಂ ಶ್ರೀಕಾಂತ ನೇಗಿನಾಳ, ಡಾ.ಸಂಜು ಕುಲಕರ್ಣಿ, ಡಾ.ಮುಲ್ಕಿ ಪಾಟೀಲ, ಮುತ್ತುರಾಜ ಶೆಟ್ಟರ್, ಗುರುಪಾದಪ್ಪ ವಾಲಿ, ವಿ.ಎನ್.ಸಾತನ್ನವರ, ರಾಚಪ್ಪ ಹಾದಿಮನಿ, ಸದಾಶಿವ ಮರಡಿ ನಿರೂಪಿಸಿದರು. ಬಸು ಹೊಸಗೌಡ್ರ ವಂದಿಸಿದರು.