ಉಚಿತ ನೇತ್ರ ತಪಾಸಣಾ ಶಿಬಿರ

ಬೆಳಗಾವಿ, ಡಿ.31- ಮೈತ್ರಿ ಆಫೀಸರ್ ಲೇಡೀಸ್ ಕ್ಲಬ್ ಬೆಳಗಾವಿ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಬೆಳಗಾವಿಯ ರುಕ್ಮಿಣಿ ನಗರದದಲ್ಲಿ ಮೈತ್ರಿ ಆಫೀಸರ್ ಲೇಡಿಸ್ ಕ್ಲಬ್ ವತಿಯಿಂದ ಬಡ ರೋಗಿಗಳಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಅಗತ್ಯವಿದ್ದವರಿಗೆ ಉಚಿತ ಕನ್ನಡಕ ಹಾಗು ಆಪರೇಶನ್ ವ್ಯವಸ್ಥೆ ಮಾಡಲಾಗುವುದು. ಸುಮಾರು 200 ರೋಗಿಗಳ ಪರೀಕ್ಷೆ ಈ ಶಿಬಿರದಲ್ಲಿ ಮಾಡಲಾಯಿತು.
ಮೈತ್ರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಮೈತ್ರಾಯೀ ಬಿಸ್ವಾಸ್, ಉಪಾಧ್ಯಕ್ಷೆ ತನುಜಾ ಹಿರೇಮಠ, ಕಾರ್ಯದರ್ಶಿ ಸಂಗೀತ, ಹಾಗೂ ಸುನಂದಾ ಕರಿಲಿಂಗನವರ್, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಾಜನಂದಾ ಘಾರ್ಗಿ,ಗೀತಾ ಬ್ಯಾಕೊಡ, ಕೀರ್ತಿ ರಜಪೂತ, ಆರತಿ ಅಂಗಡಿ, ರೇಖಾ ಪಾಟೀಲ,ಸುಜಾತಾ ದೊಡಮನಿ, ಬಿಂದನ ಪಾಟೀಲ, ದೀಪಾ ಪವಾರ ಭಾರತಿ ಇಚಂಗಿಮಠ ಜ್ಯೊತಿ ಹೊಸಮನಿ ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
ಮುಂದೆಯೂ ಅನೇಕ ರೀತಿಯಲ್ಲಿ ಸಮಾಜ ಸೇವೆಯ ಉದ್ದೇಶವನ್ನು ಮೈತ್ರಿ ಕ್ಲಬ್ ಹೊಂದಿದೆ.