ಉಚಿತ ನೇತ್ರ ತಪಾಸಣಾ ಶಿಬಿರ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜು17: ಪಟ್ಟಣದ ಇಂಚಲ ರಸ್ತೆಯ ಡಾ ಎ ಎನ್ ಬಾಳಿ ಆಸ್ಪತ್ರೆಯಲ್ಲಿ ಇಕ್ಸಾನಾ ನೇತ್ರಾಲಯ ಹಾಗೂ ಗ್ರಾಮೀಣ ಜಾಗೃತ ನಾಗರೀಕ ವೇದಿಕೆ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಜರುಗಿತು
ಚಿತ್ರನಟ ಶಿವರಂಜನ ಬೋಳನ್ನವರ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಬಡ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಅನುಕೂಲವಾಗಿವೆ ಎಂದರು.
ಡಾ. ಪ್ರಭುರಾಜ ಬಾಳಿ, ಡಾ. ಪ್ರಗ್ಯಾ ಬಾಳಿ ಮಾತನಾಡಿ,ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ಎರಡ್ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು, ಎಂದರು.
ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಎಸ್ ಎಸ್ ಶರಣಪ್ಪನವರ, ಡಾ ಪ್ರಗ್ಯಾ ಬಾಳಿ, ಡಾ ಎ ಎನ್ ಬಾಳಿ, ವೈದ್ಯರು, ಅನೇಕರು ಇದ್ದರು.