ಉಚಿತ ನೇತ್ರಾ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

????????????????????????????????????

ಸಿರುಗುಪ್ಪ ಏ 03 : ತಾಲೂಕಿನ ದೇವಲಾಪುರ ಗ್ರಾಮದ ಶ್ರೀಎರಿತಾತ ಮಠದ ಆವರಣದಲ್ಲಿ ಬಸವ ಬಳಗ ಟ್ರಸ್ಟ್, ಎರಿತಾತ ಟ್ರಸ್ಟ್ ಕಮಿಟಿ, ಹಾಗೂ ಡಾ.ವಿಜಯ ನಾಗರಾಜ ಕಣ್ಣಿನ ಪಟಲದ ಚಿಕಿತ್ಸಾ ಲೇಸರ್ ಮತ್ತು ಶಸ್ತ್ರ ಚಿಕಿತ್ಸಾ ಕೇಂದ್ರ ಬಳ್ಳಾರಿ ಇವರ ಸಹಯೋಗದೊಂದಿಗೆ ನಡೆದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೋರೋನಾ ಆತಂಕದ ನಡುವೆ ಖರ್ಚಿನ ಭಯದಿಂದ ಸೂಕ್ತ ಚಿಕಿತ್ಸೆ ಪಡೆಯದೇ ದೂರ ಉಳಿದ ಹಿರಿಯ ನಾಗರೀಕರ, ಬಡವರ ಆರೋಗ್ಯದ ಸೇವೆ ಬಯಸಿ ಉಚಿತವಾಗಿ ವಯಸ್ಸಿನವರ ಮಸುಕಾದ ಕಣ್ಣುಗಳನ್ನು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ನಡೆಸಿ ಸೂಕ್ತ ಮಾಹಿತಿ ನೀಡುವ ಮೂಲಕ ಅಂಧತ್ವವನ್ನು ತೊಲಗಿಸಲು ಬಡವರ ಪಾಲಿನ ದಾರಿದೀಪವಾದ ಬಸವ ಬಳಗ ಟ್ರಸ್ಟ್, ಎರಿತಾತ ಮಠದ ಟ್ರಸ್ಟ್ ಹಾಗೂ ವಿಶ್ವಸಿರಿ ಕ್ರೆಡಿಟ್ ಸೌಹಾರ್ದ ಸಹಕಾರ ನಿ. ಹಾಗೂ ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರ ಬ್ಯಾಂಕುಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಅಭಿಪ್ರಾಯಿಸಿದರು.
ಶಿಬಿರದಲ್ಲಿ ಕೋವಿಡ್ ಪರೀಕ್ಷೆ, ಬಿ.ಪಿ, ಶುಗರ್ ಪರೀಕ್ಷೆ ಹಾಗೂ ಡಾ.ನಾಗರಾಜ, ಡಾ.ಗೀತಾ ರವರಿಂದ ಕಣ್ಣಿನ ಪರೀಕ್ಷೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಬಸವ ಮಠದ ಬಸವಭೂಷಣ ಸ್ವಾಮಿ, ಬಸವರಾಜಪ್ಪ ಶರಣರು, ವೀರಶೈವ ತರುಣ ಸಂಘದ ಅಧ್ಯಕ್ಷ ಟಿ.ಎಮ್.ಶಿವಕುಮಾರ, ಬಸವ ಬಳಗದ ಅಧ್ಯಕ್ಷ ಡಾ. ನಾ.ಮಾ.ಶಿವಪ್ರಕಾಶ, ಎರಿತಾತ ಟ್ರಸ್ಟ್‍ನ ಅಧ್ಯಕ್ಷ ಪ್ರಭುಗೌಡ, ಬಿ.ಜೆ.ಪಿ ತಾಲೂಕು ಅಧ್ಯಕ್ಷ ಆರ್.ಸಿ.ಪೊಂಪನಗೌಡ ಮುಖಂಡರಾದ ಜಿ.ಮಲ್ಲಿಕಾರ್ಜುನ, ವಿರುಪಾಕ್ಷಗೌಡ, ಎನ್.ಜಿ.ಬಸವರಾಜ, ಚಳಗುರ್ಕಿ ಸಿದ್ದನಗೌಡ, ವಕೀಲ ಮಲ್ಲನಗೌಡ, ಆರ್.ಬಸವಲಿಂಗಪ್ಪ, ಮರೇಗೌಡ ಸೇರಿದಂತೆ ತಪಾಷಣೆಗೆ ಆಗಮಿಸಿದ ಸಾರ್ವಜನಿಕರು ಇದ್ದರು.