ಉಚಿತ ನೀರು ವ್ಯವಸ್ಥೆ ಸ್ಮರಣಿಯ: ಯರನಾಳ ಶ್ರೀ

ವಿಜಯಪುರ: ಜೂ.27:ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶದಲ್ಲಿ ಸಮಾಜಿಕ ಕಳಕಳಿಯುಳ್ಳ ಹಾಜಿಮಸ್ತಾನ ಗೌಂಡಿ ಅವರ ಸೇವೆ ಸ್ಮರಣಿಯವಾಗಿದೆ ಎಂದು ಸುಕ್ಷೇತ್ರ ವಿರಕ್ತಮಠ ಯರನಾಳ ಗುರು ಸಂಗನಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಅಭಿಪ್ರಾಯ ವ್ಯಕ್ತಪಡಿಸಿದರು
ಹಿಟ್ಟಿನಹಳ್ಳಿ ಗ್ರಾಮದ ವಿದ್ಯಾನಗರದಲ್ಲಿ ಲೋಟಸ್ ಡೆವಲಪರ್ ತಂಡದ ಮುಖ್ಯಸ್ಥರಾದ ಹಾಜಿಮಸ್ತಾನ ಗೌಂಡಿ ಬಂದೇನವಾಜ ಮುಲ್ಲಾ ಸಲೀಮ ಬಾಗವಾನ ನೀರಿನ ವ್ಯವಸ್ಥೆಯನ್ನು ಮಾಡುವದರ ಮೂಲಕ ಸಾರ್ವಜನಿಕರಿಗೆ ಉಪಕಾರ ಮಾಡಿದ್ದಾರೆಂದರು.
ಸಾನಿಧ್ಯ ವಹಿಸಿದ್ದ ಯೋಗೇಶ್ವರಿ ಮಾತಾ ಮಾತನಾಡಿ ಈಗ ಮಳೆಗಾಲ ಪ್ರಾರಂಭವಾಗಿದೆ ಮನೆಗೊಂದು ಮರ ಬೆಳೆಸಿ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಲೋಟಸ್ ಡವಲಪರ್ಸ ಹಿಟ್ಟಿನಹಳ್ಳಿ ಗ್ರಾಮದ ವಿದ್ಯಾನಗರ ನಾಗರಿಕರಿಗೆ ಶುದ್ಧ ಉಚಿತ ನೀರು ಪೂರೈಸುವದರಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ
ಪರೋಪಕಾದಿಂದ ಪುಣ್ಯ ಪ್ರಾಪ್ತವಾಗುವದು. ಸ್ಥಿತಿವಂತರು ದುರ್ಭಲರಿಗೆ ಸಹಾಯ ಸಹಕಾರ ಮಾಡುವ ಅಗತ್ಯವಾಗಿದೆ . ಉಚಿತ ನೀರಿನ ಸೇವೆಯನ್ನು ಮಾಡಿದ ಲೋಟಸ್ ಡವಲಪರ್ಸ ಕಾರ್ಯ ಶ್ಲಾಘನೀಯ ಎಂದರು.
ಮುಖಂಡರಾದ ಶ್ರೀ ಸಿದ್ಧೇಶ್ವರ ಬ್ಯಾಂಕ ನಿರ್ದೇಶಕ ಹರ್ಷ ಪಾಟೀಲ ಮಾಜಿ ಮೇಯರ ಸಜ್ಛಾದೆಪೀರಾ ಮುಶ್ರೀಫ. ಸಮಥ9 ಪಾಟೀಲ ಜ್ಯೋತಿಬಾ ಚವ್ವಾಣ ಚಂದ್ರಶೇಖರ ಚೌಧರಿ ವಿಠ್ಠಪ್ಪಾ ಶಿರಬೂರ ಸಾಹೇಬಗೌಡ ದ್ಯಾ ಬಿರಾದಾರ ಮುಬೀನ ಶೇಖ ಪುಂಡಲಿಕ ಗಾಣಿಗೇರ ರಸೂಲಸಾಬ ವರಾತದಾರ ಚಿದಾನಂದ ಬಿರಾದಾರ ಮಲ್ಲಪ್ಪ ಬಾವಿಕಟ್ಟಿ ಅಶೋಕ ಕಟ್ಟಿ ಮಾನಪ್ಪ ಬಾವಿಕಟ್ಟಿ ವೇದಿಕೆಯಲ್ಲಿದ್ದರು ಲಕ್ಷ್ಮಣ ತಮಗೊಂಡ ಶ್ರೀಶೈಲ ಕೊಕಟನೂರ ನಿಂಗಪ್ಪ ಸಾರವಾಡ ಸಂತೋಷ ಬಿರಾದಾರ ದುಂಡಪ್ಪ ಬಗಲಿ ಮುದಸ್ಸರ ವಾಲಿಕಾರ ಮಹಾಂತೇಶ ಪಡನಾಡ ಆದಿಲ್ ಮುಲ್ಲಾ. ಉಪಸ್ಥಿತರಿದ್ದರು
ಹಾಜಿಮಸ್ತಾನ ಗೌಂಡಿ ಬಂದೇನವಾಜ ಮುಲ್ಲಾ ಸಲೀಮ ಬಾಗವಾನ ಇವರನ್ನು ವಿದ್ಯಾನಗರ ಬಡಾವಣೆಯ ವಾಸಿಕರು ಸನ್ಮಾನಿಸಿದರು.
ಪೆÇ್ರ ಮಹಮ್ಮದ ಗೌಸ ಪೀತಲಿ ಸ್ವಾಗತಿಸಿ ಪರಿಚಯಿಸಿದರು ಶಿವಾನಂದ ಚಿತ್ತಾಪೂರ ನಿರೂಪಿಸಿ ವಂದಿಸಿದರು.