ಉಚಿತ ದಂತ ತಪಾಸಣಾ ಶಿಬಿರ


ಸಂಜೆವಾಣಿ ವಾರ್ತೆ
ಹೊಸಪೇಟೆ, ನ.25: ಸಂಭ್ರಮ ಟ್ಯೂಟೋರಿಯಲ್ ಹಾಗೂ ಶುಭಕಾಂಕ್ಷಿ ಶಿಕ್ಷಣ ಸಂಸ್ಥೆಯ ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ ಹಾಗೂ ಮಾಹಿತಿ ಶಿಬಿರವನ್ನು ನಗರದ ಅಮರಾವತಿ ಪ್ರದೇಶದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ಸಮೀಪದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ದಂತ ವೈದ್ಯರಾದ ಡಾ.ರಾಘವೇಂದ್ರ ಕಟ್ಟಿ, ಡಾ.ಮಂಜುಳಾ ಕಟ್ಟಿ, ಡಾ.ಸ್ಪೂರ್ತಿ, ಡಾ.ಗುಣಪ್ರಿಯ ಅವರು ಶಿಬಿರವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿ ಮತ್ತು ಪೋಷಕರಿಗಾಗಿ ಆಯೋಜಿಸಿದ್ದ ಶಿಬಿರದಲ್ಲಿ ಚಿಕ್ಕಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಯಸ್ಕರಲ್ಲಿ ಕಂಡು ಬರುವ ದಂತ ಸಮಸ್ಯೆಗಳು ಮತ್ತು ಅದರ ಪರಿಹಾರದ ಬಗ್ಗೆ ಇದೇ ವೇಳೆ ಮಾಹಿತಿ ನೀಡಲಾಯಿತು. ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರ ದಂತ ತಪಾಸಣೆ ನಡೆಸಲಾಯಿತು. ಜತೆಗೆ ಚಾಕಲೇಟ್, ಪೆಪ್ಪರ್‍ಮೆಂಟ್ ಸೇವನೆ, ಹಾಗೂ ಇತರೆ ಪದಾರ್ಥಗಳ ಸೇವನಯಿಂದ ಸಾಕಷ್ಟು ಹಲ್ಲಿನ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ಜಾಗೃತಿ ವಹಿಸುವುದು ಅವಶ್ಯ ಎಂದು ವೈದ್ಯರು ಸಲಹೆ ನೀಡಿದರು.
ಸಂಭ್ರಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ತೈಲಂಗ್, ಶಾಲಿನಿ ತೈಲಂಗ್ ಸೇರಿ ಇನ್ನಿತರರು ಇದ್ದರು.