ಉಚಿತ ತರಬೇತಿ ಕಾರ್ಯಕ್ರಮ

ಕುಂದಗೋಳ,ಜು25: ತಾಲೂಕನ್ನು ಸುಂದರ ಹಾಗು ಜನತೆಗೆ ಆರ್ಥಿಕ ದೃಷ್ಟಿಕೋನದಿಂದ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ನಮ್ಮ ಸಂಸದರಾದ ಪ್ರಲ್ಹಾದ ಜೋಶಿ ಅವರು ಸದಾ ನಮಗೆ ಸಹಾಯ ಸಹಕಾರ ನಿಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಮ್.ಆರ್.ಪಾಟೀಲ ಹೇಳಿದರು.
ಅವರು ರವಿವಾರ ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣಪುರದ ಕಲ್ಯಾಣಮಂಟಪದಲ್ಲಿ ನಡೆದ ಎನ್.ಎಲ್.ಸಿ ಇಂಡಿಯಾ ಲಿ ಕಂಪನಿಯ ಸಿ.ಎಸ್.ಆರ್ ಕಾರ್ಯ ಚಟುವಟಿಕೆಯಡಿಯಲ್ಲಿ ಗ್ರಾಮವಿಕಾಸ ಸೂಸೈಟಿ ವತಿಯಿಂದ ಉಚಿತ ಟೇಲರಿಂಗ್ ಹಾಗೂ ಫ್ಯಾಶನ್ ಡಿಸೈನ್ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸದರು ತಮ್ಮ ವ್ಯಾಪ್ತಿಯ ಕಂಪನಿಗಳಲ್ಲಿ ಸಿ.ಎಸ್.ಆರ್ ಅನುದಾನವನ್ನು ಧಾರವಾಡ ಜಿಲ್ಲೆಗೆ ಹೆಚ್ಚಾಗಿ ನಿಡುತ್ತಿದ್ದು ಈ ಭಾಗದ ಜನತೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ನಾವು ಕೇಳಿದ ತಕ್ಷಣ ನಿಡುತ್ತಿರುವುದು ನಮ್ಮ ತಾಲೂಕಿನ ಸೌಭಾಗ್ಯ ಎಂದು ಬಣ್ಣಿಸಿದರಲ್ಲದೆ ಮಹಿಳೆಯರಿಗಾಗಿ ನಡೆಯುವ ಈ ತರಬೇತಿಗಳನ್ನು ಮುಂದಿನ ದಿನಗಳಲ್ಲಿ ತಾಲೂಕಿನ ಸಂಶಿ, ಕಮಡೊಳ್ಳಿ, ಗುಡಗೇರಿ ಹಾಗೂ ಕ್ಷೇತ್ರವ್ಯಾಪ್ತಿಯ ಅರಳಿಕಟ್ಟಿ ಗ್ರಾಮಗಳಲ್ಲಿ ಪ್ರಾರಂಭಿಸಲಾಗುವುದು, ಹಾಗೂ ತರಬೇತಿ ಪಡೆದವರಿಗೆ ಉಚಿತ ಹೊಲಿಗೆ ಯಂತ್ರ ನೀಡುವುದು ಹಾಗು ಸ್ಥಳಿಯ ಕಂಪನಿಗಳಲ್ಲಿ ಉದ್ಯೋಗ ಕೊಡೆಸುವ ಕಾರ್ಯ ಮಾಡಲಾಗುವುದು, ಸಂಸದ ಜೋಶಿ ಅವರ ಕಾಳಜಿ ಹಾಗೂ ಸಚಿವ ಸಿ.ಸಿ.ಪಾಟೀಲ ಅವರ ಸಹಕಾರದಿಂದ ತಾಲೂಕಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳಾಗುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ಸಂಸದ ಪ್ರಲ್ಹಾದ ಜೋಶಿ ಅವರ ಪರವಾಗಿ ಅವರ ಆಪ್ತ ಕಾರ್ಯದರ್ಶಿಯಾದ ಮಲ್ಲಿಕಾರ್ಜುನಗೌಡ ಪಾಟೀಲ ನೇರವೆರಿಸಿ ಮಾತನಾಡಿ, ಈ ತರಬೇತಿ ಕಾರ್ಯಗಾರವನ್ನು 2019 ರಲ್ಲಿ ಪ್ರಾರಂಭಿಸಿದ್ದು 5000 ಜನತೆ ತರಬೇತಿ ಹೊಂದಿದ್ದು, ಕೋವಿಡನಿಂದಾಗಿ 2 ವರ್ಷ ಮಾಡಲಾಗಿಲ್ಲ ಈಗ ನನ್ನ ತವರು ಭೂಮಿಯಾದ ಕುಂದಗೋಳದಿಂದ ಪ್ರಾರಂಭವಾಗಿದ್ದು ನನಗೆ ಸಂತಸವಾಗಿದೆ ಇನ್ನು ತಾಲೂಕಿಗೆ 6000 ಜನರಿಗೆ ತರಬೇತಿ ನಿಡುವುದಾಗಿ ಹೇಳಿದರಲ್ಲದೆ, ತಾಲೂಕಿಗೆ ಸಂಸದರ ವ್ಯಾಪ್ತಿಯ ಕೆಲಸಗಳನ್ನು ಎಡ ಬಿಡದೆ ಜನತೆಗೆ ನಿಡುವಲ್ಲಿ ಎಮ್.ಆರ್.ಪಾಟೀಲ ಅವರು ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳಿದರು. ಅದರ ಜೊತೆಗೆ ಸಂಸದರು ಸರ್ಕಾರಿ ಶಾಲೆ ಮಕ್ಕಳಲ್ಲಿ ಖಾಸಗಿ ಶಾಲೆ, ಸರ್ಕಾರಿ ಶಾಲೆ ಬೇದಭಾವನೆ ಬಾರದಿರಲು 1177 ಶಾಲೆಗಳಿಗೆ ಬಣ್ಣ ಮಾಡಿಸುವ ಯೋಜನೆ ಮೂಲಕ ಕಾರ್ಯ ನಡೆದಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಕಲ್ಯಾಣಪುರ ಬಸವಣ್ಣಜ್ಜನವರು ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳಾ ಸಬಲೀಕರಣಕ್ಕಾಗಿ ಕ್ರಾಂತಿ ಮಾಡಿದರು, ಅಕ್ಕಮಹಾದೇವಿ, ಸತ್ಯಕ್ಕ, ಅಬ್ಬಕ್ಕ, ಸಾಲುಮರದ ತಿಮ್ಕಕ್ಕ ಅನೇಕ ಮಹಿಳೆಯರು ಮಹಾನ ಸಾಧನೆ ಮಾಡಿದ್ದಾರೆ ನಿವು ಕೂಡ ತರಬೇತಿ ಪಡೆದು ನಿಮ್ಮ ಜೀವನ ರೂಪಿಸಿಕೊಂಡು ಸಾಧನೆ ಮಾಡಿರಿ ಎಂದು ಆಶಿರ್ವದಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕ್ಷದ್ಯಕ್ಷ ರವಿಗೌಡ ಪಾಟೀಲ, ಪ.ಪಂ ಅಧ್ಯಕ್ಷ ಪ್ರಕಾಶ ಕೊಕಾಟೆ, ಉಪಾಧ್ಯಕ್ಷ ಹನಮಂತ ರಣತೂರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ಭರಮಗೌಡ ದ್ಯಾವನಗೌಡ್ರ, ಈಶ್ವರಪ್ಪ ಗಂಗಾಯಿ, ಬಿ.ಟಿ.ಗಂಗಾಯಿ, ಬಸವರಾಜ ಬಾಳಿಕಾಯಿ, ಕುಮಾರ ಸೊರಟೂರ, ಬಸವರಾಜ ನಾವಳ್ಳಿ, ಸುಭಾಶ ಸಾದರ, ಗಿರೀಶ ಗಾಣಗೇರ, ಯಲ್ಲಪ್ಪ ಬಾರಕೇರ, ಹನಮಂತ ಮೇಲಿನಮನಿ,ಮಂಜುನಾಥ ಹಿರೇಮಠ, ಪ್ರವೀಣ ಬಡ್ನಿ, ನಾಗರಾಜ ಸುಭರಗಟ್ಟಿ, ವಾಗೇಶ ಗಂಗಾಯಿ, ತರಬೇತಿ ವ್ಯವಸ್ಥಾಪಕ ಜಗದೀಶ ನಾಯ್ಕರ ಸೇರಿದಂತೆ ಅನೇಕರಿದ್ದರು.