ಉಚಿತ ಜಾನುವಾರು ತಪಾಸಣೆ ಶಿಬಿರ

ಔರಾದ: ಸೆ.14:ತಾಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ರಿಲಯನ್ಸ ಫೌಂಡೇಶನ್ ಬೀದರ್ ಹಾಗೂ ಔಟರಿಚ್ ಸಂಸ್ಥೆ ಬೀದರ ಸಹಯೋಗದಲ್ಲಿ ಉಚಿತ ಜಾನುವಾರು ತಪಾಸಣೆ ಶಿಬಿರ ಜರುಗಿತು.

ಸಂಗೋಪನಾ ಇಲಾಖೆಯಲ್ಲಿ ಜಾನುವಾರು ಸಾಕಾಣಿಕೆ ರೈತರಿಗಾಗಿ ಹತ್ತು ಹಲವಾರು ಯೋಜನೆಗಳಿವೆ, ರೈತರು ಈ ಯೋಜನೆಗಳ ಮಾಹಿತಿಗಳನ್ನು ಪಡೆದು ಲಾಭಪಡೆಯಬೇಕು ಎಂದು ಠಾಣ ಕುಸುನೂರು ಸರಕಾರಿ ಪಶು ಆಸ್ಪತ್ರೆಯ ವೈದ್ಯ ಡಾ. ಶ್ರೀರಾಮ್ ತಿಳಿಸಿದರು. ಬುಧವಾರ ತಾಲೂಕಿನ ಹಿಪ್ಪಳ ಗಾಂವ್ ದಲ್ಲಿ ರಿಲಯನ್ಸ್ ಫೌಂಡೇಶನ್ ಬೀದರ ಹಾಗೂ ಔಟ್ ರಿಚ್ ಸಂಸ್ಥೆ, ಹಾಗು ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಜರುಗಿದ ಉಚಿತ ಜಾನುವಾರು ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರ ರೈತರಿಗಾಗಿಯೇ ಅನೇಕ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದೆ. ರೈತರು ಯೋಜನೆಯ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಗಳನ್ನು ಪಡೆದು, ಸರಕಾರದ ಸೌಲಭ್ಯಗಳನ್ನು ಪಡೆದು ಸಮೃಧ್ಧಿಯಾಗಬೇಕು ಎಂದರು.

ರಿಲಯನ್ಸ್ ಫೌಂಡೇಷನ್ ಜಿಲ್ಲಾ ಸಹಾಯಕ ಕಾರ್ಯಕ್ರಮ ಅಧಿಕಾರಿ ಮಹೇಶ ಕಣಜೆ ಮಾತನಾಡಿ, ಹಳ್ಳಿಗಾಡಿನಲ್ಲಿ ರೈತರು ಕೃಷಿಯೊಂದಿಗೆ, ಜಾನುವಾರು ಸಾಕಣೆ ಮಾಡಿ ಉತ್ತಮ ರೀತಿಯಿಂದ ಹೈನುಗಾರಿಕೆಯಲ್ಲಿ ಉತ್ತೇಜನ ಪಡೆಯುತ್ತಿರುವುದು ಸಂತಸ ತಂದಿದೆ. ರೈತರ ಬದುಕಿಗೆ ಭದ್ರಬುನಾದಿ ನೀಡುವ ಹೈನುಗಾರಿಕೆ ವೃತ್ತಿ ರೈತರಿಗೆ ಸದಾ ಬೆನ್ನೆಲುಬಾಗಿ ನಿಂತಿದೆ. ರೈತರು ಕೃಷಿ ಯೊಂದಿಗೆ ಉತ್ತಮ ತಳಿಯ ಜಾನುವಾರುಗಳನ್ನು ಸಾಕಿ, ಅವುಗಳಿಂದ ಬರುವ ಹಾಲಿನ ಉತ್ಪನ್ನಗಳಿಂದ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು ಎಂದರು.

ಶಿಬಿರದಲ್ಲಿ ನೂರಾರು ರಾಸುಗಳು, ಆಕಳುಗಳು, ಎಮ್ಮೆಗಳು, ಕರುಗಳಿಗೆ ಸೂಕ್ತ ತಪಾಸಣೆ ಜೊತೆಗೆ ಅವುಗಳಿಗೆ ಔಷಧಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಸಂತೋಷ ಚಾಂಡೇಶ್ವರೇ, ಗ್ರಾಪಂ ಉಪಾಧ್ಯಕ್ಷ ಅರವಿಂದ್ ಮೇತ್ರೆ, ಸಂಜೀವ ಪಾಟೀಲ್, ಅಂಗದ ಸಿಂಗಾಳೆ, ಮಂಜುನಾಥ, ಪ್ರಕಾಶ ಬಿರಾದಾರ್, ವಿಲಾಸ ಬಿರಾದಾರ್, ಶಿವಕುಮಾರ ಹೂಗಾರ, ನಾಗನಾಥ, ಅರ್ಜುನ್, ಶ್ಯಾಮ್, ಉಮಾಕಾಂತ ಬಿರಾದಾರ್, ಮಾರುತಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.