
ದಾವಣಗೆರೆ-ಏ.೧೨; ನಾಡಿನ ಪ್ರಖ್ಯಾತ ಹಿರಿಯ ಚಿತ್ರ ಕಲಾವಿದರೂ, ಹಿರಿಯ ಜನಪದ ತಜ್ಞರಾದ ಕೀರ್ತಿಶೇಷ ಪಿ.ಆರ್.ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಪ್ರಯುಕ್ತ ಏ. 16 ರಂದು ಬೆಳಿಗ್ಗೆ 9-30 ಗಂಟೆಗೆ ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದಲ್ಲಿ ವಿವಿಧ ವಯೋಮಾನದ ವಿಭಾಗಗಳಲ್ಲಿ ಚಿತ್ರ ಬರೆಯುವ ಕಲಾಸಕ್ತರಿಗೆ ಉಚಿತವಾಗಿ ಸ್ಥಳದಲ್ಲೇ ಉಚಿತ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದು ಹೆಸರು ನೊಂದಾಯಿಸುವ ದಿನ 15 ರವರೆಗೆ ವಿಸ್ತರಿಸಲಾಗಿದೆ ಎಂದು ಸದಾನಂದ ಹೆಗಡೆ ತಿಳಿಸಿದ್ದಾರೆ.ಒಂದನೇ ತರಗತಿಯಿಂದ ಕಿರಿಯರಿಗೆ, ಹಿರಿಯರಿಗೆ ವಯೋಮಾನಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಿದ್ದು ಚಿತ್ರ ಬರೆಯುವ ಪರಿಕಲ್ಪನೆ ಸ್ಪರ್ಧಿಗಳ ಆಯ್ಕೆ ಚಿತ್ರ ಬರೆಯಲು ಡ್ರಾಯಿಂಗ್ ಶೀಟ್ ಉಚಿತವಾಗಿ ಸಂಸ್ಥೆ ವಿತರಿಸಲಿದ್ದು, ಪರಿಕರ ಸ್ಪರ್ಧಿಗಳೇ ತರಬೇಕು ಎಂದು ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಗುವುದು, ಬಹುಮಾನ ವಿಜೇತರಿಗೆ ಮಾತ್ರ ಸ್ಮರಣಿಕೆಯೊಂದಿಗೆ ನಗದು ಪುರಸ್ಕಾರವೂ ಇದೆ ಎಂದು ಶಾಂತಯ್ಯ ಪರಡಿಮಠ ತಿಳಿಸಿದ್ದಾರೆ. ದಾವಣಗೆರೆ ಚಿತ್ರಕಲಾ ಪರಿಷತ್ತಿನ ಆಶ್ರಯದಲ್ಲಿ ದಾವಣಗೆರೆಯ ವಿದ್ಯಾನಗರದ ಕಲಾ ಪರಿಷತ್, ದಾವಣಗೆರೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಸ್ವಸ್ತಿಕ್ ರ‍್ಟ್ ಗ್ಯಾಲರಿ ಸಹಯೋಗದೊಂದಿಗೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ, ಕಿರಿಯ ಚಿತ್ರ ಕಲಾವಿದರು 9448345584, 9343402497, 9844262279, 9916468579 ಈ ಸನೀಹ ವಾಣಿಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದು ಎಂದು ಎ.ಮಹಾಲಿಂಗಪ್ಪ ತಿಳಿಸಿದ್ದಾರೆ.