ಉಚಿತ ಕ್ರಿಕೇಟ್ ತರಬೇತಿ ಶಿಬಿರ.

ಹರಪನಹಳ್ಳಿ.ಏ.೮; ಪಟ್ಟಣ ಎಸ್.ಯು.ಜೆ.ಎಂ ಪಿಯು ಕಾಲೇಜಿನಲ್ಲಿ ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್‌ನ ಸಹಯೋಗದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಅವರ ಸಹೋದರ ಹಾಗೂ ಹರಪನಹಳ್ಳಿಯ ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರ 52ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಉಚಿತ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಮಾತನಾಡಿ ನನ್ನ ಸಹೋದರ ಎಂ.ಪಿ.ರವೀಂದ್ರ ಅವರು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ ಜನಪರ ಅಭಿವೃದ್ದಿ ಕಾರ್ಯಗಳು ಚಿರಸ್ಥಾಯಿಯಾಗಿದ್ದು, ಇಂದಿಗೂ ಅವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದ ಅವರು ಯುವಕರಲ್ಲಿ ಕ್ರೀಡೆಗಳು ಆರೋಗ್ಯ ವೃದ್ಧಿಸುತ್ತವೆ ಹಾಗಾಗಿ ಇರುವ ಸಮಯದಲ್ಲಿ ಕೆಲ ಸಮಯ ಕ್ರೀಡೆಗಳಿಗಾಗಿ ಮೀಸಲಿಡಬೇಕು ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಕವಿತ ವಾಗೀಶ್, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್‌.ಶಿವರಾಜ್, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಕ್ರಬ್ಬಿ ದಾದಾಪೀರ್, ಪರಶೆಟ್ಯಾರ್ ಮನೋಜ್ ಕುಮಾರ್, ಗಾಯಿತ್ರಮ್ಮ, ಕಡಬಗೇರೆ ನರೇಂದ್ರ, ಗುಡಿಹಳ್ಳಿ ಗೋಪಿ, ಚೇತನ್ ಕುಮಾರ್, ಸೇರಿದಂತೆ ಮತ್ತಿತರರು ಈ ಶಿಬಿರದಲ್ಲಿ ಭಾಗವಹಿಸಿದ್ದರು.