ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರ

ಕಲಬುರಗಿ: ಎ.23:ನಗರದ ಮೆಡಿಸಕ್ಯಾನ್ ಡಯಾಗ್ನೋಸ್ಟಿಕ್ ಕೇರ್‍ನಲ್ಲಿ ಸ್ತ್ರೀರೋಗ ನಾರಾಯಣ ಹೆಲ್ತ್ ಬೆಂಗಳೂರು, ಮೆಡಿಸಕ್ಯಾನ್ ಲ್ಯಾಬ್, ರೋಟರಿ ಇಂಟರ್‍ನ್ಯಾಶನಲ್ ಸಖಿ ವಿಭಾಗ, ಧನ್ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರವನ್ನು ಸ್ತ್ರೀರೋಗ ಮತ್ತು ರೋಬೋಟಿಕ್ ಸರ್ಜನ್ ನಾರಾಯಣ ಹೆಲ್ತ್ ಬೆಂಗಳೂರು ಡಾ. ರೋಹಿತ್ ಆರ್. ರಾನಡೆ ಅವರು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಶ್ರೀಭಾರತಿ ನಾರಾಯಣ ಹೆಲ್ತ್, ಮೆಡಿಸ್ಕಾನ್‍ನ ವ್ಯವಸ್ಥಾಪಕ ನಿರ್ದೇಶಕ ಡಾ. ಚೇತನ್ ದುರ್ಗಿ, ನಿರ್ದೇಶಕಿ ಡಾ. ಸುಚಿತ್ರ್ ದುರ್ಗಿ, ಸಾರ್ವಜನಿಕ ಆರೋಗ್ಯ ಸಲಹೆಗಾರರಾದ ಡಾ. ವಿಜಯಶ್ರೀ ಮಠದ, ಅಸಿಸ್ಟೆಂಟ್ ಗವರ್ನರ್ ರೋಟರಿ ಫೌಂಡೇಶನ್ ಉಮಾ ಗಚ್ಚಿನಮನಿ, ರೋಟರಿ ಸಖಿ ವಿಭಾಗದ ಅಧ್ಯಕ್ಷೆ ಅನುರಾಧಾ ಕುಮಾರಸ್ವಾಮಿ, ಗೋಪಾಲ್, ವಿಶಾಲ್, ಆನಂದ್, ನಾಗಮ್ಮ, ಇಂದಿರಾ, ಮಹೀಂದ್ರ ಹಾಗೂ ಸದಸ್ಯರು ಇದ್ದರು. ಶಿಬಿರದಲ್ಲಿ ಮಹಿಳೆಯರಲ್ಲಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಯಿತು. ನಂತರ 50 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಪ್ಯಾಪ್ ಸ್ಮಿಯರ್ ತಪಾಸಣೆ ಮಾಡಲಾಯಿತು.