ಉಚಿತ ಕೌಶಲ್ಯ, ಉದ್ಯಮಶೀಲತಾ ತರಬೇತಿ ಉದ್ಘಾಟನೆ

ಗದಗ,ಮಾ24 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಂಸ್ಥೆಯಾದ, ಕರ್ನಾಟಕ ಉದ್ಯಮಶೀಲತಾಭೀವೃದ್ದಿ ಕೆಂದ್ರ (ಸಿಡಾಕ್), ಧಾರವಾಡ ಹಾಗೂ ಸಿಡಾಕ್ ಜಿಲ್ಲಾ ಕಛೇರಿ ಗದಗ ಇವರ ಸಹಯೋಗದಲ್ಲಿ ಇತ್ತೀಗೆ ಗದಗ ನಗರದ ಗಂಜಿಬಸವೇಶ್ವರ ವೃತ್ತದಲ್ಲಿನ ಮಹೇಶ್ವರಿ ವಿವಿದೋದ್ದೆಶಗಳ ಮಹಿಳಾ ಮಂಡಳಿಯಲ್ಲಿ ಉದ್ಘಾಟಿಸಲಾಯಿತು.

ಜಿಲ್ಲಾ ಕೌಶಲ್ಯಾಭಿವೃಧ್ಧಿ ಅಧಿಕಾರಿಗಳಾದ ಮಲ್ಲೂರ ಬಸವರಾಜ ರವರು ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ, ಬ್ಯೂಟಿಶಿಯನ್ ತರಬೇತಿಯಲ್ಲಿ ಸ್ವತಹಃ ಅಭ್ಯರ್ಥಿಗಳನ್ನೆ ಗ್ರಾಹಕರೆಂದು ಭಾವಿಸಿ ಆದಷ್ಟು ರಾಸಾಯನಯುಕ್ತ ಸೌಂದರ್ಯವರ್ದಕಗಳನ್ನು ಬಳಸದೆ, ಹರ್ಬಲ್ ಸೌಂಧರ್ಯವರ್ಧಕಗಳನ್ನು ಬಳಸಿ, ಗ್ರಾಹಕರ ಸೌಂದರ್ಯವನ್ನು ವೃದ್ಧಿಸಿಯೆಂದು ತಿಳಿಸಿದರು. ಹೆಚ್ಚಿನ ಕೌಶಲ್ಯ ಉನ್ನತೀಕರಣಕ್ಕಾಗಿ ಕೌಶಲ್ಯ ಇಲಾಖೆಯನ್ನು ಸಂಪರ್ಕಿಸಲು ಸೂಚಿಸಿದರು. ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯ ವಿವಿಧ ಸೌಲಭ್ಯಗಳ ಬಗ್ಗೆ ವಿಸ್ತ್ರತವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಾಕ್ ಸಂಸ್ಥೇಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಎಚ್ ಅಂಗಡಿಯವರು, ವಹಿಸಿದ್ದರು. ತರಬೇತಿ ದಿನಗಳಲ್ಲಿ ಅಭ್ಯರ್ಥಿಗಳ ಆರೋಗ್ಯದೃಷ್ಠಿಯಿಂದ ಭಾರತ ಸರ್ಕಾರದ ಎಸ್. ಓ. ಪಿ. ಅನ್ವಯ ಲಿಕ್ವಿಡ್ ಪ್ರೀಎಲೆಕ್ರ್ಟಾನಿಕ ಸ್ಯಾನಿಟೈಜರ್, ಮತ್ತು ಯು, ವಿ ಸ್ಯಾನಿಟೈಜರ್, ವ್ಯವಸ್ಥೆಯನ್ನು ಈ ಕೋವಿಡ್ -19 ರ ಸಂರ್ಭದಲ್ಲಿ ಮಾಡಲಾಗಿದ್ದು, ಸದರಿ ಯಂತ್ರಗಳಿಂದ ಎಲ್ಲಾ ಅಭ್ಯರ್ಥಿಗಳು, ತರಬೇತುದಾರರು ಮತ್ತು ತರಬೇತಿಯಲ್ಲಿ ಬಳಸುವ ಉಪಕರಣಗಳನ್ನು ಕಡ್ಡಾಯವಾಗಿ ಸ್ಯಾನಿಟೈಜ್ ಮಾಡಿಕೋಳ್ಳಲು ತಿಳಿಸಿದರು ಹಾಗೂ ಕೌಶಲ್ಯ ತರಬೇತಿಯೊಂದಿಗೆ, ತರಬೇತಿಗಳಲ್ಲಿ ಒಳ್ಳೆಯ ಸಂಸ್ಕಾರ ರೋಡಿಸಿಕೋಳ್ಳಲು ತಿಳಿಸಿದರು.

ಜಿಲ್ಲೆಯ ಸ್ಟೆಟ್ ಬ್ಯಾಂಕ ಆಫ್. ಇಂಡಿಯಾ, ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಬಿ. ಮುರಳಿ ನಾಯ್ಕ್ ಅವರು ಮಾತನಾಡಿ ಬ್ಯೂಟಿಶಿಯನ್ ತರಬೇತಿ ಹೊಂದಿದ ನಂತರ ಯೋಜನಾ ಅನುಷ್ಠಾನಕ್ಕೆ ಅವಶ್ಯವಿದ್ದ ಸಾಲ ಸೌಲಭ್ಯಕ್ಕಾಗಿ ವಿವಿಧ ಬ್ಯಾಂಕಗಳನ್ನು ಸಂಪರ್ಕಿಸಲು ಅಭ್ಯರ್ಥಿಗಳಿಗೆ ತಿಳಿಸಿದರು ಹಾಗೂ ಭಾರತಿಯ ರಿಝರ್ವ ಬ್ಯಾಂಕಿನ ಆಧೇಶದನ್ವಯ ಅಭ್ಯರ್ಥಿಗಳು ರೂ. 10 ಲಕ್ಷದವರೆಗಿನ ಸಾಲ ಪಡೆಯಲು ಯಾವುದೇ ಭರ್ದತೆಯನ್ನು ವದಗಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಮುಂದುವರೆದು ಈ ವಿಷಯದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ಇದ್ದಲ್ಲಿ ತಮ್ಮನ್ನು ಸಂಪರ್ಕಿಸಲು ತಿಳಿಸಿದರು. ಇದಲ್ಲದೆ, ಸಾಮಾಜಿಕ ಭರ್ದತೆ ದೃಷ್ಟಿಯಿಂದ, ಅಟಲ್ ಪೆನ್ಶನ್ ಯೋಜನೆ, ರೂ 12 ಮಾಸಿಕ ಇನ್ಶುರನ್ಸ್ ವಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು ಮತ್ತು ಇನ್ನೂ ಹೆಚ್ಚಿನ ಯೋಜನೆಗಳ ಬಗ್ಗೆ ತರಬೇತಿ ದಿನದ ಸಂರ್ಭದಲ್ಲಿ ತಿಳಿಸಿಕೋಡಲಾಗುವುದು ಎಂದು ತಿಳಿಸಿದರು.

ಮಹೇಶ್ವರಿ ವಿವಿದೋದ್ದೆಶಗಳ ಮಹಿಳಾ ಮಂಡಳದ ಮುಖ್ಯಸ್ಥರಾದ ಜಯಶ್ರೀ ಬಿ. ಹಿರೇಮಠ ಮಾತನಾಡಿ, ಬ್ಯೂಟಿಶಿಯನ್ ತರಬೇತಿಯ ರೂಪರೇಶೆಗಳು ಹಾಗೂ ತರಬೇತಿಗೆ ಸಂಬಂಧ ಪಟ್ಟಂತಹ ವಿಷಗಳನ್ನು, ಉದಾಹರಣೆಗಳೊಂದಿಗೆ, ಈಗಾಗಲೆ ಬ್ಯೂಟಿಶಿಯನ್ ಚಟುವಟಿಕೆಗಳನ್ನು ನಡೆಸುತ್ತಿರುವ ಮಹಿಳೆಯರ ಹಲವು ಉದಾಹರಣೆಗಳನ್ನು ನೀಡಿ ಆರ್ಥಿಕ ಸಭಲತೆ ಬಗ್ಗೆ ತಿಳುವಳಿಕೆ ನಿಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ ಮುಳಗುಂದ ತರಬೇತುದಾರರು ಸಿಡಾಕ್, ಗದಗ, ರವರು ನೇರವೆರಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ವಿಜಯಲಕ್ಷ್ಮಿ ನೆಲ್ಲೂರ ರವರು ನೇರವೆರಿಸಿದರು. ಜಿಲ್ಲೆಯ ಒಟ್ಟು 25 ಮಹಿಳೆಯರು ತರಬೇತಿಯ ಲಾಭವನ್ನು ಪಡೆಯುತ್ತಿದ್ದಾರೆಂದು ಜಂಟಿ ನಿರ್ದೇಶಕ ಸಿ. ಎಚ್. ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೋಟೋ ಶಿರ್ಷಿಕೆ 24ಗದಗ4) ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಂಸ್ಥೆಯಾದ, ಕರ್ನಾಟಕ ಉದ್ಯಮಶೀಲತಾಭೀವೃದ್ದಿ ಕೆಂದ್ರ (ಸಿಡಾಕ್), ಧಾರವಾಡ ಹಾಗೂ ಸಿಡಾಕ್ ಜಿಲ್ಲಾ ಕಛೇರಿ ಗದಗ ಇವರ ಸಹಯೋಗದಲ್ಲಿ ಇತ್ತೀಗೆ ಗದಗ ನಗರದ ಗಂಜಿಬಸವೇಶ್ವರ ವೃತ್ತದಲ್ಲಿನ ಮಹೇಶ್ವರಿ ವಿವಿದೋದ್ದೆಶಗಳ ಮಹಿಳಾ ಮಂಡಳಿಯಲ್ಲಿ ಉದ್ಘಾಟಿಸಲಾಯಿತು.