ಉಚಿತ ಕೊಡುವ ಕಾಂಗ್ರೆಸ್ ಕೊಡುಗೆ ಎನೂ?: ವಿಜಯೇಂದ್ರ

ಮೈಸೂರು: ಏ.22:- ಅಷ್ಟು ವರ್ಷಗಳ ಕಾಲ ಜನರಿಂದ ಅವಕಾಶ ಪಡೆದರೂ ಜನರಿಗೆ ಅನೂಕೂಲ ನೀಡದ ಕಾಂಗ್ರೆಸ್ ಈಗ ಉಚಿತ ಘೋಷಿಸಲು ನಾಚಿಕೆ ಆಗುವುದಿಲ್ಲವೇ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ಯಡಿಯೂರಪ್ಪ ಹೇಳಿದರು.
ನಗರ ರಾಜೇಂದ್ರಕಲಾಮಂದಿರದಲ್ಲಿ ಆಯೋಜಿಸಿದ್ದ ಕೃಷ್ಣರಾಜ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಂಬೇಡ್ಕರ್, ಹಿಂದುಳಿದ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡವು. ಆದರೆ, ತಮ್ಮದೇ ಆದ ಸರ್ಕಾರ ಇದ್ದಾಗ ಇಂತಹ ಯಾವುದೇ ಉಚಿತಗಳನ್ನು ನೀಡಲಿಲ್ಲ. ಈಗ ಮತ್ತೆ ಅಧಿಕಾರ ಹಿಡಿಯುವ ದುರುದ್ದೇಶದಿಂದ ಉಚಿತಗಳನ್ನು ಘೋಷಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಹಿರಿಯರಾದ ರಾಮದಾಸ್ ಅವರು ನಾಲ್ಕು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಆದರೆ, ಶ್ರೀವತ್ಸ ಅವರನ್ನು ಅಭ್ಯರ್ಥಿಯಾಗಿ ಮಾಡಿದರು. ವರಿಷ್ಠರು ಇಂತಹದೊಂದು ತೀರ್ಮಾನ ಮಾಡುತ್ತಾರೆಂದು ಊಹಿಸಿ ಇರಲಿಲ್ಲ. ಆದರೆ, ಕೇಂದ್ರದ ನಾಯಕರನ್ನು ನಾನು ಈ ವೇಳೆ ಅಭಿನಂದಿಸುತ್ತೇನೆ. ಮುಂದಿನ 30 ವರ್ಷಕ್ಕೆ ಹೊಸ ನಾಯಕತ್ವ ಕೊಡಬೇಕು ಹಾಗೂ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕೊಡಬೇಕೆಂಬ ನಿಟ್ಟಿನಲ್ಲಿ ಇಂತಹ ಅವಕಾಶ ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಪಕ್ಷದಲ್ಲೇ ಉಳಿದಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. 18 ಕೋಟಿ ಸದಸ್ಯತ್ವ ಹೊಂದಿರುವ ಪಕ್ಷ ನಮ್ಮದಾಗಿದೆ ಎಂದರು.
ಇನ್ನೂ 18 ದಿನವಿದ್ದು, ಇಂದಿನಿಂದಲೇ ಕಾರ್ಯಕರ್ತರು ಕೂತಲ್ಲಿ, ನಿಂತಲ್ಲಿ ಕೇಂದ್ರದ ಯೋಜನೆ ತಿಳಿಸಿ ಶ್ರೀವತ್ಸ ಅವರನ್ನು 40 ಸಾವಿರ ಮತಗಳ ಅಂತರದಿಂದ ಗೆಲುವಿಗೆ ಪ್ರಯತ್ನಿಸಿ ಎಂದರು.
ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮಾತನಾಡಿ, ಟಿಕೇಟ್ ಕೇಳಬಾರದು ಎಂದು ತಿಳಿಸಿತ್ತು. ಆದರೆ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ವೇಳೆಯಲ್ಲಿ ನನ್ನ ಹೆಸರು ಇತ್ತು. ಹಾಗೆಯೇ ರಾಮದಾಸ್ ಅವರನ್ನು ಬಿಟ್ಟರೆ ಮತ್ತೊಬ್ಬರ ಹೆಸರು ಹೇಳಿ ಎಂದಾಗ ನನ್ನ ಹೆಸರು ಹೇಳಿದ್ದರು. ಹೀಗಾಗಿ ಕಾರ್ಯಕರ್ತರು ಹಾಗೂ ನಾಯಕರ ಸಲಹೆ ಮೇರೆಗೆ ನಾನು ಅಭ್ಯರ್ಥಿ ಆಗಿದ್ದಾನೆ. ನಾನು ಜನರಿಗೆ ಪರಿಚಯ ಇಲ್ಲದಿರಬಹುದು. ಆದರೆ ನೀವೇ ನನ್ನನ್ನು ಪರಿಚಯಸಬೇಕಿದೆ. ಈ ಹಿಂದೆಯೂ ಜನಸಂಘದ ಗಂಗಾಧರ್ ಅವರು ಆಯ್ಕೆಯಾಗಿದ್ದರು. ಅಂತೆಯೇ ಮತ್ತೊಮ್ಮೆ ಬಿಜೆಪಿಯನ್ನು ನೀವೆಲ್ಲರೂ ಗೆಲ್ಲಿಸುವ ಕೆಲಸ ಮಾಡಿ ಎಂದರು.
ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಕೌಟಿಲ್ಯ ಎಂ.ರಘು ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ವಿಜಯದ ಸಂಕೇತವಾಗಿ ವಿಜಯೇಂದ್ರ ಇದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಘೋಷಿಸಿ ಬಸವಣ್ಣನ ಆದರ್ಶ ಈಡೇರಿಸಲಾಗಿದೆ. ವಿಜಯೇಂದ್ರ ಅವರು ಯಡಿಯೂರಪ್ಪ ಅವರಿಂದ ಅಶ್ವಮೇಧಕ್ಕೆ ಕುದುರೆ ಪಡೆದುಕೊಂಡು ಬಂದಿದ್ದಾರೆ. ಈ ಭಾಗದಲ್ಲಿ 15 ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲ್ಲು ಬಂದಿದ್ದಾರೆ. 1994 ರ ಇತಿಹಾಸ ಮರುಕಳಿಸುವ ಸಾಧನೆ ಈ ಬಾರಿ ಮತದಾರರು ಮಾಡಲಿದ್ದಾರೆ ಎಂದರು.