ಉಚಿತ ಕಿಟ್ ವಿತರಣೆ

ಕಲಬುರಗಿ:ಫೆ.24:ಕರ್ನಾಟಕ ರಾಜ್ಯ ಜವಳಿ ಅಭಿವೃದ್ದಿ ನಿಗಮ ನಿಯಮಿತ ಸಂಸ್ಥೆಯ ಯೋಜನೆಯಡಿಯಲ್ಲಿ ಸಮರ್ಥ ಟೆಕ್ಸಟೈಲ್ ಕೌಶಲ್ಯ ತರಬೇತಿ ಸಂಸ್ಥೆ ಹಾಗೂ ಶ್ರೀರಕ್ಷಾ ಸೊಸಿಯಲ್ ವೆಲ್‍ಫರ್ ಟ್ರಸ್ಟ ಸಹಯೋಗದೊಂದಿಗೆ ಕಲಬುರಗಿ ನಗರದ ಹಿರಾಪೂರ ಕ್ರಾಸ್ ಹತ್ತಿರ ನ್ಯೂ ಘಾಟಗೇ ಲೇಔಟ್ ನಲ್ಲಿ ಮಹಿಳೆಯರಿಗಾಗಿ ಉಚಿತವಾಗಿ ಎಸ್.ಎಂ.ಓ ಹೋಲಿಗೆ ತರಬೇತಿ ನೀಡುತ್ತಿದ್ದು. ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ಉಚಿತವಾಗಿ ತರಬೇತಿ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತರಬೇತಿಯ ಶಿಕ್ಷಕಿಯರಾದ ಶ್ರೀಮತಿ ಶೋಭಾ, ನಿಲಮ್ಮಾ ಪಾಟಿಲ್, ಶ್ರೀರಕ್ಷಾ ಸೊಸಿಯಲ್ ವೆಲ್‍ಫರ್ ಟ್ರಸ್ಟನ ಅಧ್ಯಕ್ಷರಾದ ಶ್ರೀ ಬೌಧ್ದಪ್ರಿಯನಾಗಶೇನ ಇತರರು ಇದ್ದರು.