ಉಚಿತ ಕಣ್ಣಿನ ತಪಾಸಣೆ

ಕಲಬುರಗಿ:ಜ.17: ಹಿರಾಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅನಿತಾ ಜಾಧವ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳು ಒಕ್ಕೂಟದ ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಕಾರ್ಯದರ್ಶಿ ವಿಕಾಸ್ ಸವಾರಿಕರ್, ಬ್ರಹ್ಮಾನಂದ ಮಿಂಚಾ, ಬಸವರಾಜ ಸಾಮ್ರಾಟ್, ಜಗನ್ನಾಥ ಪೂಜಾರಿ, ಪ್ರಕಾಶ ನಿಂಬರ್ಗಾ, ಭೀಮಾಶಂಕರ ಧುದನಿ, ಪಂಡಿತ ಶರ್ಮಾ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.