ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ತಾಳಿಕೋಟೆ:ಎ.16: ನಾನು ನಮ್ಮ ತಂದೆ ತಾಯಿಯ ಸ್ಮರಣೆಯ ಸಲುವಾಗಿ ಬಡವರು,ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ನೇತ್ರ ತಪಾಸಣೆ ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ ಮಾಡುತ್ತಿದ್ದೇನೆಂದು ಮನಿಯಾರ್ ಸೇವಾ ಟ್ರಸ್ಟ್ ಅಧ್ಯಕ್ಷ ಅಯೂಬ್ ಮನಿಯಾರ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಮ್ಮನ್ನು ಅಗಲಿದ ತಂದೆ ಮದನಸಾಬ ಮನಿಯಾರ, ತಾಯಿ ಅಮಿನಬಿ ಮನಿಯಾರ ಅವರ ಸ್ಮರಣಾರ್ಥ ಕಳೆದ 9 ವರ್ಷದಿಂದ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಪವಿತ್ರ ರಮಜಾನ ಮಾಸದಲ್ಲಿ ಬಡಜನರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿಸುವ ಸೇವೆ ಮಾಡುತ್ತಿದ್ದೇವೆ ಎಂದರು.

ಈ ವರ್ಷವೂ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಹಮ್ಮಿಕೊಂಡಿದ್ದು ತಾಳಿಕೋಟೆ ತಾಲೂಕಿನ ಜನರು ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ನಿಮ್ಮ ಹೆಸರನ್ನು ನೋಂದಾಯಿಸಲು ಏ.17 ಕೊನೆಯ ದಿನವಾಗಿದೆ.ಏ.18 ರಂದು ಉಚಿತ ಕಣ್ಣಿನ ತಪಾಸಣೆಯನ್ನು ಮುದ್ದೇಬಿಹಾಳ ಪಟ್ಟಣದ ಸ್ಟೇಟ್ ಬ್ಯಾಂಕ್ ಹತ್ತಿರದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ.ಇದರಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಆಯ್ಕೆಯಾದವರನ್ನು ಏ.19 ರಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವವರಿಗೆ ಮುದ್ದೇಬಿಹಾಳಕ್ಕೆ ತೆರಳಲು ವಾಹನದ ಸೌಲಭ್ಯವನ್ನು ಕೂಡಾ ಮಾಡಿದ್ದೇನೆಂದರು.

ಹೆಸರನ್ನು ನೋಂದಾಯಿಸಲು ಖಾಜಾಹುಸೇನ ಸಗರಿ ಸಗರ ಮೇಡಿಕಲ್ ಕತ್ರಿ ಭಜಾರ ಹಾಗೂ ಮುಜಾಹೀದ ನಮಾಜಕಟ್ಟಿ ತಾಳಿಕೋಟೆ ಮೋ. 9663488384ಗೆ ಸಂಪರ್ಕಿಸಬಹುದಾಗಿದೆ ಹೆಸರು ನೋಂದಾಯಿಸಲು ಬರುವಾಗ ಒಂದು ಐಡೆಂಟಿಟಿ ಸೈಜ್ ಕಲರ್ ಪೆÇೀಟೋ ಹಾಗೂ ಆಧಾರ್‍ಕಾರ್ಡ್ ಝರಾಕ್ಸ್ ಪ್ರತಿ ತರಬೇಕೆಂದು ಅವರು ಮನವಿ ಮಾಡಿದ್ದಾರೆ.

ರಂಜಾನ್ ಕಿಟ್ ವಿತರಣೆ : ಪ್ರತಿ ವರ್ಷ ರಂಜಾನ್ ಹಬ್ಬಕ್ಕೆ ಬಡವರಿಗೆ ಹಬ್ಬ ಮಾಡಲು ರಂಜಾನ್ ಕಿಟ್ ವಿತರಣೆಗೆ ಹಬ್ಬದ ಸಾಮಗ್ರಿಗಳನ್ನು ಏ.20 ರಂದು ತಾಳಿಕೋಟಿಯಲ್ಲಿ ಕೊರ್ತಿ ಶಾದಿ ಹಾಲ್‍ನಲ್ಲಿ ರಂಜಾನ್ ಕಿಟ್‍ಗಳನ್ನು ನೀಡಲಾಗುತ್ತದೆ ಎಂದು ಅಯೂಬ ಮನಿಯಾರ ಅವರು ತಿಳಿಸಿದ್ದಾರೆ.