ಉಚಿತ ಕಣ್ಣಿನ ತಪಾಸಣಾ ಶಿಬಿರ

ಕೆ.ಆರ್.ಪುರ, ಫೆ.೩-ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಅವರ ೫೭ ನೇ ಹುಟ್ಟುಹಬ್ಬ ಅಂಗವಾಗಿ ಬಿ.ಜಿ.ರಾಜೇಶ್ ನೇತೃತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ನನ್ನ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದಲ್ಲಿ ಮುಖಂಡರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು, ಹೆಚ್ಚು ಸಂತಸ ತಂದಿದೆ ಎಂದು ನುಡಿದರು.

ಬಿದರಹಳ್ಳಿಯಲ್ಲಿ ಉಚಿತ ಕಣ್ಣನ ತಪಾಣೆ,ಶಾಲಾ ಮಕ್ಕಳಿಗೆ ಪುಸ್ತಕಗಳ ವಿತರಣೆ, ಪೌರ ಕಾರ್ಮಿಕರಿಗೆ ಹಾಗೂ ಪಂಚಾಯತಿ ಸಿಬ್ಬಂದಿಗೆ ವಸ್ತ್ರಗಳ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬದ ಆಚರಣೆ ಮಾಡಲಾಗಿದೆ ಎಂದು ನುಡಿದರು.

ನನ್ನ ಮೇಲೆ ಇಟ್ಟಿರುವ ನಂಬಿಕೆ, ಜನರ ಋಣ ತೀರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ, ಇದರಲ್ಲಿ ಕಾರ್ಯಕರ್ತರ ಶ್ರಮ ಅಡಗಿದೆ ಮುಂದಿನ ದಿನಗಳಲ್ಲಿ ಮಹದೇವಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾರ್ಗದರ್ಶನ ನೀಡುತ್ತೆನೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಮಂಡಲ ಅಧ್ಯಕ್ಷರಾದ ನಟರಾಜ್, ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಜಿ.ರಾಜೇಶ್,ಮಾಜಿ ಜಿಪಂ ಸದಸ್ಯ ಗಣೇಶ್, ಮುಖಂಡರಾದ ಬಿ.ಎಸ್. ಮಧುಕುಮಾರ್, ವೇಣು,ಸಂಪಂಗಿ, ರಾಮಮೂರ್ತಿ ಇದ್ದರು

ಸುದ್ದಿಚಿತ್ರ: ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ರವರ ೫೭ ನೇ ಹುಟ್ಟುಹಬ್ಬ ಬಿದರಹಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಜಿ.ರಾಜೇಶ್ ಅವರು ಸನ್ಮಾನಿಸಿ ಶುಭಾಶಯ ಕೋರಿದರು.