ಉಚಿತ ಕಣ್ಣಿನ ತಪಾಸಣಾ ಶಿಬಿರ 114 ಜನ ಫನಾಭವಿಗಳು

ಹೊಸಪೇಟೆ ಮಾ26: ಬಂಡ್ರಿ ರಾಘಪ್ಪ ಶೆಟ್ಟಿ ಧರ್ಮಛತ್ರದ ವತಿಯಿಂದ ಛತ್ರದ ಸಭಾಂಗಣದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಕಣ್ಣಿನ ನಾನಾ ತೊಂದರೆಗೆ ಒಳಗಾದ ಒಟ್ಟು 114 ಜನರಿಗೆ ಉಚಿತ ತಪಾಸಣೆ ಮಾಡುವ ಮೂಲಕ ಅವರಿಗೆ ಅಗತ್ಯ ಔಷಧ ಹಾಗೂ ಚಾಳೀಸುಗಳನ್ನು ವಿತರಿಸಲಾಯಿತು.
ದೃಷ್ಟಿದೋಷ, ಕಣ್ಣಿನ ಪೊರೆ, ರೌಚವಂ, ಮಧುಮೇಹದಿಂದಾಗುವ ಕಣ್ಣಿನ ತೊಂದರೆ ಕಾಯಿಲೆಗಳಿಗೆ ಉಚಿತ ತಪಾಸಣೆ ಮಾಡಲು ಖ್ಯಾತ ನೇತ್ರತಜ್ಞ ಡಾ.ಮಂಜುನಾಥ ಅವರ ತಂಡ ಕಣ್ಣಿನ ತಪಾಸಣೆ ಮಾಡುವ ಮೂಲಕ ಸಲಹೆ ನೀಡಿತು.
ಬಂಡ್ರಿ ರಾಘಪ್ಪ ಶೆಟ್ಟಿ ಧರ್ಮಛತ್ರದ ಮಾಲೀಕರಾದ ಬಂಡ್ರಿ ವೆಂಕಟೇಶ್, ಬಂಡ್ರಿ ಸತೀಶ್, ಬಂಡ್ರಿ ವಿಶ್ವಾತ್ ಶಿಬಿರದಲ್ಲಿ ಪಾಲ್ಗೊಂಡಿದ್ದರು. .