ಉಚಿತ ಔಷಧಿಗಳ ವಿತರಣೆಗೆ ರೈತ ಸಂಘ ಒತ್ತಾಯ

ಕೋಲಾರ:ಜೂ.೫,ಜಿಲ್ಲಾಧ್ಯಂತ ಟೊಮೋಟೊ ಗೆ ಭಾಧಿಸುತ್ತಿರುವ ಬಿಂಗಿ ರೋಗ ಹಾಗೂ ನಕಲಿ ಔಷಧಿ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿಯನ್ನು ಉಚಿತವಾಗಿ ನೀಡಬೇಕೆಂದು ರೈತ ಸಂಘದಿಂದ ರಾಜ್ಯ ಹೆದ್ದಾರಿ ವಡ್ಡಹಳ್ಳಿ ವೃತ್ತದಲ್ಲಿ ನಕಲಿ ಔಷಧಿ ಹಾಗೂ ಬೆಳೆ ಸಮೇತ ಹೋರಾಟ ಮಾಡಿ ಮುಳಬಾಗಿಲು ತಾಲ್ಲೂಕು ಕೃಷಿ ತೋಟಗಾರಿಕೆ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ತಾಲ್ಲೂಕು ಅದಕ್ಷ ಯಲುವಳ್ಳಿ ಪ್ರಭಾಕರ್ ರವರು ಐದು ವರ್ಷಗಳಿಂದ ಟೆಮೊಟೋ ಕ್ಯಾಪ್ಸಿಕಂಗೆ ಬಾದಿಸುತ್ತಿರುವ ರೋಗಗಳಿಂದ ರೈತರು ಕಂಗಾಲಾಗಿ ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದರು ಗುಣಮಟ್ಟದ ಔಷಧಿ ಹೆಸರಿನಲ್ಲಿ ನಕಲಿ ಔಷಧಿಗಳನ್ನು ಮಾರಾಟ ಮಾಡುತ್ತಿರುವ ದಂದೆಕೋರರ ವಿರುದ್ದ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಗರ್ಭಿಣಿ ಮಹಿಳೆ ಹಾಗೂ ಮಗುವಿನ ಬೆಳವಣಿಗೆಗೆ ಯಾವ ರೀತಿ ಪೌಷ್ಠಿಕ ಆಹಾರ ಅವಶ್ಯಕತೆ ಇದಿಯೇ ಅದೇ ರೀತಿ ರೈತ ಬೆಳೆಯುವ ಬೆಳೆಗಳಿಗೆ ಭೂಮಿಗೆ ಗುಣಮಟ್ಟದ ಕೊಟ್ಟಿಗೆ ಗೊಬ್ಬರ ಗುಣಮಟ್ಟದ ಔಷಧಿ ರಸಗೊಬ್ಬರ ನೀಡುವ ಮುಖಾಂತರ ಬೆಳೆ ಬೆಳೆದು ಇನ್ನೇನು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಹಾಕಿದ ಬಂಡವಾಳ ಜೊತೆಗೆ ಲಾಭ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ರೈತರಿಗೆ ಪಸಲು ಬಂದಿರುವ ಬೆಳೆಯಲ್ಲಿ ಊಜಿ, ಇಲ್ಲವೆ ಅಂಗಮಾರಿ ಜೊತೆಗೆ ರೋಸ್ ರೋಗಗಳು ಲಕ್ಷಾಂತರ ರೂಪಾಯಿ ಹಣ ನೀಡಿ ಸಿಂಪಡಣೆ ಮಾಡುವ ಔಷಧಿಗಳಿಂದ ನಿಯಂತ್ರಣಕ್ಕೆ ಬಾರದೇ ಇರುವುದು ದುರದೃಷ್ಟಕರ ಎಂದು ರೈತರ ಕಣ್ಣೀರಿನ ಕಷ್ಟಕ್ಕೆ ಸರ್ಕಾರಗಳು ಸ್ಪಂಧಿಸುತ್ತಿಲ್ಲವೆಂದು ಕಿಡಿಕಾರಿದರು.
ಒಂದು ಎಕರೆ ಬೆಳೆ ಬೆಳೆಯಬೇಕಾದರೆ ೩ಲಕ್ಷ ಖರ್ಚು ಬರುತ್ತದೆ. ಆದರೆ ಹಾಕಿದ ಬಂಡವಾಳ ಸಿಗುತ್ತದೆ ಎಂಬ ನಂಬಿಕೆ ಇಲ್ಲದ ರೈತ ತನ್ನ ಬೆವರ ಹನಿಗೆ ತಕ್ಕ ಬೆಳೆ ಬರಲಿ ಅದನ್ನಾದರೂ ನೋಡಿ, ಸಂತೋಷದಲ್ಲಿ ಇರೋಣ ಎಂದರೆ ರೋಗಳು ಬೆಳೆಯನ್ನು ಬೆಳೆಯನ್ನು ಇನ್ನು ನೂರಾರು ಔಷಧಿ ಕಂಪನಿಗಳು ತಾಮುಂದು ನಾಮುಂದು ಎಂದು ರೋಗ ನಿಯಂತ್ರಣಕ್ಕೆ ಔಷಧಿ ವಿತರಣೆ ಮಾಡುತ್ತಿದ್ದರೂ ರೋಗ ಮಾತ್ರ ನಿಯಂತ್ರಣಕ್ಕೆ ಬಾರುತ್ತಿಲ್ಲ. ಆದರೆ ಅಂಗಡಿ ಹಾಗೂ ಕಂಪನಿಗಳ ಮಾಲೀಕರು ರೈತರ ಹೆಸರಿನಲ್ಲಿ ಹಗದಲು ದರೋಡೆ ಮಾಡಿ ಶ್ರೀಮಂತರಾಗುತ್ತಿದ್ದಾರೆಂದು ಆರೋಪ ಮಾಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ನಕಲಿ ಔಷಧಿ ಮಾರಾಟ ಮಾಡುವ ದಂದೆಕೋರರ ವಿರುದ್ದ ಕ್ರಮ ಕೈಗಳ್ಳಲು ವಿಶೆಷ ತಂಡ ರಚನೆ ಮಾಡಿ ನಕಲಿ ಕಂಪನಿ ಮಾಲೀಕರು ಹಾಗೂ ಅವರಿಗೆ ಸಹಕರಿಸುವ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಿ ಗೂಂಡಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ಗುಣಮಟ್ಟದ ಔಷಧಿಗಳನ್ನು ರೋಗ ನಿಯಂತ್ರಣಕ್ಕೆ ವಿತರಣೆ ಮಾಡಬೇಕು. ಇಲ್ಲವಾದರೆ ನಷ್ಟ ಬೆಳೆ ಸಮೇತ ಅಧಿಕಾರಿಗಳ ಮನೆ ಮುಂದೆ ಆಹೋರಾತ್ರಿ ದರಣಿ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ, ಒತ್ತಾಯಿಸಲಾಯಿತು.
ಹೋರಾಟದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಾರುಕ್‌ಪಾಷ, ಬಂಗಾರಿ ಮಂಜು, ಸುನಿಲ್‌ಕುಮಾರ್ ರಾಜೇಶ್, ಬಾಸ್ಕರ್, ಗುರುಮೂರ್ತಿ,. ವಿಜಯ್‌ಪಾಲ್, ವಿಶ್ವ, ದೇವರಾಜ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಅಂಬ್ಲಿಕಲ್ ಮಂಜುನಾಥ, ಯಾರಂಘಟ್ಟ ಗಿರೀಶ್, ಈಕಂಬಳ್ಳಿ ಮಂಜುನಾಥ, ರಾಮಸಾಗರ ವೇಣು, ಮಾಸ್ತಿ ಯಲ್ಲಪ್ಪ, ಹರೀಶ್, ವೆಂಕಟೇಶ್, ಮುಂತಾದವರು ಇದ್ದರು.