ಉಚಿತ ಊಟ ವಿತರಣೆ

ಬಂಟ್ವಾಳ, ಜೂ.೫- ಬಂಟ್ವಾಳ ತಾಲೂಕಿನ ಬಿ. ಸಿ ರೋಡ್ ಜಂಕ್ಷನ್ ಬಳಿ ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ಇವರ ಆಶ್ರಯದಲ್ಲಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ನಿರಾಶ್ರಿತರಿಗೆ ವಲಸೆ ಕಾರ್ಮಿಕರಿಗೆ,ಲಾರಿ ಚಾಲಕರಿಗೆ,ಉಚಿತ ಊಟ ವಿತರಿಸುವ ವಾಹನಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್, ಸುರೇಶ್ ಪೂಜಾರಿ ಜೋರಾ, ಸಿದ್ದಿಕ್ ಸರವೂ,ಹರ್ಷದ್ ಸರವೊ, ಸಿರಾಜ್ ಮದಕ,ಮೆಹರೂಬ್ ಪರ್ಲಿಯಾ, ಕಬೀರ್ ಆಲಡ್ಕ, ಶರೀಫ್ ಬೂಯಾ ಮೊದಲಾದವರು ಉಪಸ್ಥಿತರಿದ್ದರು.