ಉಚಿತ ಉಪಹಾರ ವಿತರಣೆ

ಮುದ್ದೇಬಿಹಾಳ:ಜೂ.3: ಕಳೇದ ವರ್ಷದಿಂದ ಎಡಬಿಡದೇ ಕಾಡುತ್ತಿರುವ ಕೋರೊನಾ ಜನರು ತತ್ತರಿಸಿಹೋಗಿದ್ದರೂ ಪೋಲಿಸ್ ಇಲಾಖೆ ಹಾಗೂ ಪತ್ರಕರ್ತರು ಪ್ರಂಟಲೈನ ವಾರಿಯರ್ಸ್ ಗಳಾಗಿ ತಮ್ಮ ಜೀವದ ಹಂಗುತೊರೆಗೆ ಕೊರೊನಾ ನಿಯಂತ್ರಣಕ್ಕಾಗಿ ಪ್ರಾಮಾಣಿಕ ಸೇವೆ ನಿಜಕ್ಕೂ ಶ್ಲಾಘನಿಯ ಎಂದು ಯುವ ಮುಖಂಡ ಕಾಮರಾಜ ಬಿರಾದಾರ ಹೇಳಿದರು.

ಪಟ್ಟಣದ ಇಲ್ಲಿನ ಪೋಲಿಸ್ ಠಾಣೆಯಲ್ಲಿ ಕೋರೊನಾ ಪ್ರಂಟ್ ಲೈನ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಇಲ್ಲಿನ ಪ್ರತಿಷ್ಠಿತ ಇಡ್ಲಿ ಸ್ವಾಮಿಗಳೇಂದೇ ಖ್ಯಾತಿ ಪಡೆದ ಸದು ಮಠ ಅವರು ಉಚಿತ ಉಪಹಾರ ವಿತರಣಾ ಕಾರ್ಯಕ್ರಮದಲ್ಲಿ ಬಾಗವಹಸಿ ಅವರು ಮಾತನಾಡಿದರು.

ಸಧ್ಯ ಕೋರೊನಾ ಎರಡನೆ ಅಲೇಯಲ್ಲಿ ಪೋಲಿಸ್ ಇಲಾಖೆಯವರು ಸರಕಾರದ ಮಾರ್ಗಸೂಚನೆಗೆ ಸೂಕ್ತ ಸಮಯಕ್ಕೆ ಸಾರ್ವಜನಿಕರು ಪಾಲನೆಯಾಗುವಂತಾಗಿದೆ ಎಂದರೆ ಪೋಲಿಸ್ ದರ್ಪ ಮತ್ತು ಜನಸಾಮಾನ್ಯರ ಮೇಲೆ ತೋರಿಸುವ ಕಾಳಜಿ ಮುಖ್ಯ ಕಾರಣವಾಗಿದೆ. ಆದÀರಲ್ಲಿ ತಮ್ಮ ಕುಟುಂಭವನ್ನು ದೂರವಿಟ್ಟು ಖಾಕಿ ಖದರ ತೊರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರನ್ನು ಮನೆಯೋಳಗೆ ಸೇರುವಂತೆ ಮಾಡಿ ತಾವು ಹೋರಗಡೆ ಇದ್ದು ಕೋರೊನಾ ಓಡಿಸುವ ಪ್ರಯತ್ನ ನಿಜಕ್ಕೂ ಮೆಚ್ಚಲೇಬೇಕು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಮನಗಂಡು ಲಾಟಿ ಎತ್ತಿರಬಹುದು ಆದರೇ ಅದೇಲ್ಲವೂ ನಮಗಾಗಿ ಎಂಬುದನ್ನು ಅರಿತುಕೊಳ್ಳುವ ಮೂಲಕ ಪೋಲಿಸರು ಎಲ್ಲರೂ ಅತ್ಯಂತ ಗೌರವದಿಂದ ಕಾಣಬೇಕು.

ಜತೆಗೆ ಪತ್ರಕರ್ತರು ಅವರಲ್ಲಿ ಎಷ್ಟೇ ಪೈಪೋಟಿ ಇರಲಿ ನಿತ್ಯ ಆಗುವ ಹೋಗುಗಳ ಬಗ್ಗೆ ಕೋರೊನಾ ಕಠೀಣ ಸ್ಥಿತಿಗತಿಗಳನ್ನು ಸರಕಾರದ, ಜನಪ್ರತಿನಿಧಿಗಳಿಗೆ ತಮ್ಮ ಸುದ್ದಿ ಮೂಲಕ ತಿಳಿಸುವ ಮೂಲಕ ಎಚ್ಚರಿಕೆ ನೀಡಿ ಕೋರೊನಾ ನಿಯಂತ್ರಣಕ್ಕಾಗಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಪಾತ್ರಬಹುದೊಡ್ಡದು ಇಂತಹ ಸಂದರ್ಭದಲ್ಲಿ ಪಟ್ಟಣದಲ್ಲಿಯೇ ಇಡ್ಲಿ ಸ್ವಾಮಿಗಳೇಂದೆ ಖ್ಯಾತಿ ಪಡೆದ ಸದು ಮಠ ಅವರು ಈ ಎರಡು ವಾರಿಯರ್ಸ್ ಗಳಿಗೆ ತಮ್ಮ ಸುಪ್ರಸಿದ್ದ ಹೋಟೇಲಿನ ಸುಪ್ರಸಿದ್ದ ಇಡ್ಲೀ ಚಟ್ನಿ, ವಡೇ ಸೇರಿಧಮತತೆ ಇತರೇ ಬೆಳಗಿ ಉಪಹಾರ ನೀಡಿ ಸಾಮಾಜಿಕ ಸೇವೆ ಸಲ್ಲಿರುವ ಕಾರ್ಯಕ್ಕೆ ನಿಜಕ್ಕೂ ಶ್ಲಾಘನಿಯ ಎಂದರು.

ಈ ವೇಳೆ ಸಿಪಿಐ ಆನಂದ ವಾಗ್ಮೋರೆ, ಪಿಎಸೈ ಎಂ ಎಸ್ ಬಿರಾದಾರ, ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ, ಪಿಂಟು ಸಾಲಿಮನಿ, ಸಂಗಪ್ಪ ಮೇಲಿಮನಿ, ಹುಸೇನ ಮುಲ್ಲಾ ಸೇರಿದಂತೆ ಹಲವರು ಇದ್ದರು.