ಉಚಿತ ಆಹಾರ ವಿತರಣೆಗೆ ವಾಹನ ವ್ಯವಸ್ಥೆ

ಧಾರವಾಡ ಮೇ.5-: ಲಾಯನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಯೋಗದೊಂದಿಗೆ ಉಚಿತ ಆಹಾರ ವಿತರಣೆ ವಾಹನದ ಉದ್ಘಾಟನೆಯನ್ನು ಲಾಯನ್ಸ ಕ್ಲಬ್‍ದ ಮಾಜಿ ಡಿಸ್ಟ್ರೀಕ್ಟ್ ಗೌರನರ ಲಾಯನ ಹರ್ಷ ದೇಸಾಯಿ ಹಾಗೂ ಅಂಜುಮನ ಪದವಿ ಕಾಲೇಜ ಧಾರವಾಡ ಪ್ರಾಂಶುಪಾಲರು ಡಾ. ಎಮ್. ಎನ್. ಮೀರಾ ನಾಯ್ಕ ಮಾಡಿದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆನೆಂದರೆ ಹಸಿದ ಹೊಟ್ಟೆಗೆ ಒಂದು ಹೊತ್ತಿನ ಊಟ ಎಂದು ಲಾಕ್‍ಡೌನ್ ಮುಗಿಯುವವರೆಗೆ ದಿನಾಲು ಮಧ್ಯಾಹ್ನ 12:30 ರಿಂದ 2:00 ಗಂಟೆಗೆ ಮಧ್ಯಾಹ್ನದ ಊಟ ಹಾಗೂ ಸಾಯಂಕಾಲ 7:30 ರಿಂದ ರಾತ್ರಿ 9:00 ಗಂಟೆಯವರೆಗೆ ರಾತ್ರೀಯ ಊಟದ ವ್ಯವಸ್ಥೆಯನ್ನು ಧಾರವಾಡ ಲಾಯನ್ಸ ಕ್ಲಬ್ ಗ್ಯಾಲಕ್ಸಿಯವರು ಹೊತ್ತಿಕೊಂಡಿದ್ದಾರೆ. ಕಾರ್ಮಿಕರಿಗೆ, ಹೊರ ಪ್ರದೇಶಗಳಿಂದ ಬಂದ ವ್ಯಕ್ತಿಗಳಿಗೆ, ರಸ್ತೆ ಬದಿಯಲ್ಲಿ ಮಲಗಿದ ಬಿಕ್ಷಕರಿಗೆ ಹಾಗೂ ಆಹಾರದ ಕೊರತೆ ಇದ್ದವರಿಗೆ ಈ ಉಚಿತ ಆಹಾರ ವಿತರಣೆ ಮಾಡುತ್ತಿದ್ದಾರೆ. ಆಹಾರ ಬೇಕಾದವರು ಈ ನಂಬರಿಗೆ ಕರೆ ಮಾಡಿ ಹೇಳಬಹುದು. (80735 22086)
ಈ ಕಾರ್ಯಕ್ರಮದಲ್ಲಿ ಲೆಯನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಅಧ್ಯಕ್ಷರಾದ ಡಾ. ಎಮ್. ಎ. ಮುಮ್ಮಿಗಟ್ಟಿ ಕಾರ್ಯದರ್ಶಿ ಲಾಯನ್ ರತಿ ಶ್ರೀನಿವಾಸನ, ಲಾಯನ್ ಪ್ರವಿಣ ಬೆಳವತ್ತಿ, ಲಾಯನ್ ರಮೇಶ, ಲಾಯನ್ ಮಂಜುಳಾ, ಲಾಯನ್ ಸುನೀಲ, ಲಾಯನ್ ಶ್ರೀನಿವಾಸ ಲಾಯನ್ ಜ್ಯೋತಿ ಹಿರೇಮಠ, ಲಾಯನ್ ಡಾ. ಎಸ್. ವಾಯ್. ಶೇಖ, ಲಾಯನ್ ಮೀನಾಕ್ಷಿ, ಲಾಯನ್ ಅನುರಾಧಾ, ಲಾಯನ ವಿನಾಯಕ, ಲಾಯನ್ ಗೋಧಾವರಿ ಪತ್ತಾರ ಹಾಗೂ ಅಂಜುಮನ ಡಿಗ್ರಿ ಕಾಲೇಜ ಧಾರವಾಡ ಪ್ರಾಂಶುಪಾಲರು ಡಾ. ಎಮ್. ಎನ್. ಮೀರಾನಾಯ್ಕ , ಲೈನ ಡಾ. ನಾಗರಾಜ ಗುದಗನವರ, ಡಾ|| ಎನ್. ಬಿ. ನಾಲತವಾಡ ಭಾಗವಹಿಸಿದ್ದರು.